ಮಂಗಳೂರು ದಸರಾ ಹಬ್ಬವು ಸುವ್ಯವಸ್ಥಿತವಾಗಿ ನಡೆಯುವಂತಾಗಲು ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಶಾಸಕ ಕಾಮತ್ ಸೂಚನೆ

ಮಂಗಳೂರು ದಸರಾ ಹಬ್ಬವು ಸುವ್ಯವಸ್ಥಿತವಾಗಿ ನಡೆಯುವಂತಾಗಲು ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಶಾಸಕ ಕಾಮತ್ ಸೂಚನೆ


ಮಂಗಳೂರು: ಮುಂಬರುವ ಪ್ರಸಿದ್ದ ಮಂಗಳೂರು ದಸರಾ ಹಬ್ಬವು ಸುವ್ಯವಸ್ಥಿತವಾಗಿ ನಡೆಯುವಂತಾಗಲು ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಶಾಸಕ ವೇದವ್ಯಾಸ ಕಾಮತ್ ಅವರು ಸೂಚನೆ ನೀಡಿದರು.

ದಸರ ಮೆರವಣಿಗೆ ಸಾಗುವ ರಸ್ತೆಗಳ ಕಾಮಗಾರಿಗಳನ್ನು ವಿಶೇಷ ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. ಕುದ್ರೋಳಿ ದೇವಸ್ಥಾನದಿಂದ ಲೇಡಿಹಿಲ್, ಲಾಲ್‌ ಭಾಗ್, ಪಿ.ವಿ.ಎಸ್ ಸರ್ಕಲ್, ವೆನ್‌ಲಾಕ್ ಆಸ್ಪತ್ರೆ,  ಮೋಹಿನಿ ವಿಲಾಸ್, ನ್ಯೂಚಿತ್ರ ಟಾಕೀಸ್, ಅಳಕೆ, ಮೊದಲಾದ ರಸ್ತೆಗಳ ದಾರಿ ದೀಪ ಸರಿಪಡಿಸುವುದು, ರಸ್ತೆ ವಿಭಜಕಗಳನ್ನು ಶುಚಿಗೊಳಿಸುವುದು, ರಸ್ತೆಗಳ ಹೊಂಡ ಮುಚ್ಚುವುದು, ಕಸ, ಮಣ್ಣು ತೆರವುಗೊಳಿಸುವುದು, ರಸ್ತೆಯ ಇಕ್ಕೆಲಗಳಲ್ಲಿರುವ ಮರದ ಗೆಲ್ಲುಗಳನ್ನು ಅರಣ್ಯ ಇಲಾಖೆ ನಿಯಮದಂತೆ ತೆರವುಗೊಳಿಸಬೇಕು. ಮುಂದುವರಿದು ಮಂಗಳಾದೇವಿ ದೇವಸ್ಥಾನ, ಕಾರ್ ಸ್ಟ್ರೀಟ್ ವೆಂಕಟರಮಣ ದೇವಸ್ಥಾನ ಸಂಪರ್ಕ ರಸ್ತೆಗಳಲ್ಲಿ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗಗೊಂಡು ಹಬ್ಬದ ಸಂಭ್ರಮಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಕ್ರಮವಹಿಸುವಂತೆ ಸೂಚನೆ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article