ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನೆ

ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನೆ

ಮಂಗಳೂರು: ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷ  ಸುರೇಂದ್ರ ಕಂಬಳಿ ಅಧ್ಯಕ್ಷತೆಯಲ್ಲಿ ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆ ಮಂಗಳವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ಜರುಗಿತು.

ಗೃಹಲಕ್ಷ್ಮೀ ಯೋಜನೆಯಡಿ ಮಂಗಳೂರು ತಾಲೂಕಿನಲ್ಲಿ ಪ್ರಸ್ತುತ  85044 ಫಲಾನುಭವಿಗಳು ನೋಂದಣಿಯಾಗಿದ್ದು, ಈವರೆಗೆ 3,05,04,48000 ಮಂಜೂರಾಗಿರುತ್ತದೆ ಎಂದು ಸಭೆಗೆ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾಹಿತಿ ನೀಡಿದರು.

ಮಂಗಳೂರು-ಗುರುಪುರ-ಕೈಕಂಬ-ಬಜ್ಪೆ ಮೂಲಕ ಕಟೀಲಿಗೆ ಮತ್ತು ವಾಮಂಜೂರು ಪರಾರಿ ಮೂಲಕ ಉಳಾಯಿಬೆಟ್ಟುಗೆ ಸರಕಾರಿ ಬಸ್ಸು ಸೇವೆ ಒದಗಿಸಿಕೊಡುವುದರ ಬಗ್ಗೆ ಸದಸ್ಯರು ಚರ್ಚಿಸಿದರು.

ರಾಜ್ಯ ಸರಕಾರದ ಯುವನಿಧಿ ಯೋಜನೆಗೆ 2025ನೇ ಸಾಲಿನಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಈ ಬಗ್ಗೆ ಕರಪತ್ರವನ್ನು ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.

ತಾಲೂಕು ಪಂಚಾಯತ್ ಸಹಾಯಕ ಲೆಕ್ಕಾಧಿಕಾರಿ ಪರಮೇಶ್ವರ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಕುಮಾರ್ ಹೊಳ್ಳ, ಜಿಲ್ಲಾ ಗ್ಯಾರಂಟಿ ಯೋಜನೆ ಅನು??ಟನ ಸಮಿತಿ ಸದಸ್ಯರಾದ ಅಲ್‌ಸ್ಟನ್ ಡಿ ಕುನ್ಹ, ತಾಲೂಕು ಗ್ಯಾರಂಟಿ ಯೋಜನೆ ಅನು??ಟನ ಸಮಿತಿ ಸದಸ್ಯರಾದ ರಾಜೇಶ್ ಶೆಟ್ಟಿ,  ಪ್ರಶಾಂತ್ ಎಸ್, ನವಾಜ್, ಶೈಲಾ ನೀತಾ ಡಿಸೋಜಾ, ಮೊಹಮ್ಮದ್ ರಫೀಕ್, ರಿತೇಶ್ ಅಂಚನ್, ಜಯಂತಿ, ವಿದ್ಯಾ, ಡಿ.ಎಂ. ಮುಸ್ತಾಫ ಮತ್ತಿತರರು ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article