ಹಾಲು ಸೊಸೈಟಿ, ಅಂಗಡಿಯಿಂದ ಕಳ್ಳತನ
Tuesday, August 19, 2025
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪದ ಐನೆಕಿದು ಬಸ್ ನಿಲ್ದಾಣದಲ್ಲಿರುವ ಹಾಲು ಉತ್ಪಾದಕ ಸಹಕಾರ ಸಂಘದ ಕಚೇರಿ ಮತ್ತು ಪಕ್ಕದ ಅಂಗಡಿಯಿಂದ ಕಳ್ಳತನ ನಡೆದ ಘಟನೆ ಆ.18 ರಂದು ಬೆಳಕಿಗೆ ಬಂದಿದೆ.
ಆ.17ರ ತಡರಾತ್ರಿ ಕಳ್ಳತನ ನಡೆಸಿರುವುದಾಗಿ ತಿಳಿದು ಬಂದಿದೆ.
ಹಾಲು ಸೊಸೈಟಿಯ ಶಟರ್‌ನ ಬೀಗ ಮುರಿದು ಒಳ ನುಗ್ಗಿದ ಕಳ್ಳರು 3900 ನಗದು ಕಳ್ಳತನ ಮಾಡಿದ್ದಾರೆ. ಯಶವಂತ ಕೊಪ್ಪಲಗದ್ದೆ ಎಂಬವರ ಅಂಗಡಿಗೆ ಬೀಗ ಮುರಿದು ನುಗ್ಗಿದ ಕಳ್ಳರು ಅಂದಾಜು 10 ಸಾವಿರದಷ್ಟು ನಗದು ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ. ಕಳ್ಳರು ಕಳ್ಳತನ ನಡೆಸಲು ಬಳಸಿದ ಪಿಕ್ಕಾಸಿ ಸ್ಥಳದಲ್ಲೆ ಬಿಟ್ಟು ತೆರಳಿದ್ದು, ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸಿರುವುದಾಗಿ ತಿಳಿದು ಬಂದಿದೆ.
