ಜಿಲ್ಲೆಯ ಅಭಿವೃದ್ಧಿಯಲ್ಲಿ ಸ್ಥಳೀಯ ಯುವಜನರಿಗೆ ಹೆಚ್ಚಿನ ಆದ್ಯತೆಗೆ ಸುನೀಲ್ ಕುಮಾರ್ ಬಜಾಲ್ ಒತ್ತಾಯ

ಜಿಲ್ಲೆಯ ಅಭಿವೃದ್ಧಿಯಲ್ಲಿ ಸ್ಥಳೀಯ ಯುವಜನರಿಗೆ ಹೆಚ್ಚಿನ ಆದ್ಯತೆಗೆ ಸುನೀಲ್ ಕುಮಾರ್ ಬಜಾಲ್ ಒತ್ತಾಯ


ಮಂಗಳೂರು: ಜಿಲ್ಲೆಯ ಅಭಿವೃದ್ಧಿಯಿಂದ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಸ್ಥಳೀಯ ಯುವಜನರಿಗೆ ಹೆಚ್ಚಿನ ಆದ್ಯತೆ ಒದಗಿದರೆ ಅವರ ಬದುಕು ಹಸನಾಗಲಿದೆ ಅದರಿಂದ ಆದ ಬೆಳವಣೆಗೆಯಲ್ಲಿ ಮಂಗಳೂರಿನಲ್ಲಿ ಶಾಂತಿ ಸೌಹಾರ್ದ ನೆಲೆಸಲು ಸಾಧ್ಯ ಎಂದು ಡಿವೈಎಫ್‌ಐ ಮಾಜಿ ಮುಖಂಡ ಸುನೀಲ್ ಕುಮಾರ್ ಬಜಾಲ್ ಹೇಳಿದರು.

ಅವರು ಆ.12 ರಂದು ಬಲ್ಮಠದ ಸಹೋದಯ ಸಭಾಂಗಣದಲ್ಲಿ ತುಳುನಾಡ ಅಭಿವೃದ್ಧಿಡ್ ತುಳುವಪ್ಪೆ ಜೋಕ್ಲೆಗ್ ಮಲ್ಲಪಾಲ್, ಉದ್ಯೋಗ ಸೃಷ್ಟಿಸಿ, ನಿರುದ್ಯೋಗದಿಂದ ರಕ್ಷಿಸಿ ಎಂಬ ಘೋಷಣೆಯೊಂದಿಗೆ ಡಿವೈಎಫ್‌ಐ ಮಂಗಳೂರು ನಗರ ಮಟ್ಟದ ಯುವಜನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.


ದೇಶದಲ್ಲಿ ಶೇಕಡಾ 50ಕ್ಕೂ ಹೆಚ್ಚು ಯುವಜನರು ಇದ್ದಾರೆ. ಆದರೆ ಯುವಜನರು ನಿರುದ್ಯೋಗದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಯುವಜನರ ನಿಜವಾದ ಸಮಸ್ಯೆಯನ್ನು ಬಗೆಹರಿಸುವ ಬದಲು ಧರ್ಮದ ಹೆಸರಿನಲ್ಲಿ ಯುವಜನರನ್ನು ಬಲಿಪಶು ಮಾಡುತ್ತಿದ್ದಾರೆ. ಆದರೆ ಡಿವೈಎಫ್‌ಐ ಭಾಷೆ, ಲಿಂಗ, ಧರ್ಮ ಯಾವುದೇ ಭೇದವಿಲ್ಲದೆ ಎಲ್ಲರನ್ನೂ ಒಟ್ಟು ಸೇರಿಸುವ ಕೆಲಸ ಮಾಡುತ್ತಿದೆ. ದ.ಕ. ಜಿಲ್ಲೆಯನ್ನು ಬಾದಿಸುವ ಎಲ್ಲ ಸಮಸ್ಯೆಗಳಿಗೆ ಎದುರಾಗಿ ಯುವಜನರನ್ನು ಸಂಘಟಿಸುವ ಕೆಲಸ ಡಿವೈಎಫ್‌ಐ ಮಾಡುತ್ತಿದೆ ಎಂದರು.


ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಬಿ.ಕೆ. ಇಮ್ತಿಯಾಝ್ ಅವರು, ಡಿವೈಎಫ್‌ಐ ಸಂಘಟನೆಗೆ ಹೋರಾಟದ ಇತಿಹಾಸ ಇದೆ. ಸೌಹಾರ್ದ ಯುವ ಸಮ್ಮಿಲನ ಕಾರ್ಯಕ್ರಮ ಯುವಜನರನ್ನು ಒಟ್ಟುಗೂಡಿಸಲು ಸಾಧ್ಯವಾಗಿದೆ. ಶಾಂತಿ ಸೌಹಾರ್ದ ನೆಲೆಯಾದರೆ ಮಂಗಳೂರು ಬೆಳೆಯುತ್ತದೆ ಅದರಂತೆ ಉದ್ಯೋಗ ಸೃಷ್ಟಿ ಆಗುತ್ತದೆ ಇದರಿಂದ ಬಡತನ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದ ಅವರು ನಮ್ಮ ತಂಗಿ ಸೌಜನ್ಯ, ಅಕ್ಕ ವೇದವಲ್ಲಿ ಪದ್ಮಲತಾ ಸೇರಿದಂತೆ ಹಲವಾರು ಸಂಶಯಾತ್ಮಕ ಸಾವಿಗೆ ನ್ಯಾಯ ಸಿಗುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದರು.


ಪ್ರತಿಸಿಧಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಅವರು, ಕೇಂದ್ರ ಸರಕಾರ ಉದ್ಯೋಗ ಸೃಷ್ಟಿಯ ಹೆಸರಲ್ಲಿ ಇಂಟರ್ನ್‌ಶಿಪ್ ನ್ನು ಉದ್ಯೋಗ ಎಂದು ಬಿಂಬಿಸಲಾಗಿದೆ. ಇಂಟರ್ನ್‌ಶಿಪ್ ಉದ್ಯೋಗಕ್ಕಿಂತಲೂ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭಪಡಿಸುವ ಹುನ್ನಾರ ಅಡಗಿದೆ. ದ.ಕ. ಜಿಲ್ಲೆಯಲ್ಲಿಂದು ವರುಷಕ್ಕೆ 1,12,694 ವೃತ್ತಿಪರ ಶಿಕ್ಷಣ ಪಡೆದು ಸರ್ಟಿಫಿಕೇಟ್ ಹಿಡಿದು ಹೊರಬರುತ್ತಿರುವ ವಿದ್ಯಾರ್ಥಿಗಳಿಗೆ ಅರ್ಹ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಜಿಲ್ಲೆಯೊಂದರಲ್ಲೆ ಸರಕಾರದ ವಿವಿಧ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಬಿದ್ದಿವೆ. ರಾಜ್ಯ, ಕೇಂದ್ರಕ್ಕೆ ಹೋಲಿಸಿದರೆ ಲಕ್ಷಾಂತರ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸಗಳಿಗೆ ಸರಕಾರಗಳು ಮುಂದಾಗುತ್ತಿಲ್ಲ. ಬದಲಾಗಿ ಗುತ್ತಿಗೆಯಾದರಾದ, ಅರೆಕಾಲಿಕ ಉದ್ಯೋಗಗಳಲ್ಲಿ ದುಡಿಸಲಾಗುತ್ತಿದೆ. ಡಿವೈಎಫ್‌ಐ ನಿರುದ್ಯೋಗದ ವಿರುದ್ಧ ದೇಶವ್ಯಾಪಿಯಲ್ಲಿ ಚಳುವಳಿಯನ್ನು ಸಂಘಟಿಸಿದ್ದು. ದ.ಕ ಜಿಲ್ಲೆಯಲ್ಲಿಯೂ ಈ ಚಳುವಳಿಯನ್ನು ಮುನ್ನಡೆಸಲು ಸಿದ್ದತೆ ನಡೆಸಲಾಗುತ್ತಿದ್ದೆ. ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಯುವಜನ ಜಾಥಾದಲ್ಲಿ ಜಿಲ್ಲೆಯ ಯುವಜನರ ನಿರುದ್ಯೋಗದ ಸಮಸ್ಯೆಗಳನ್ನು, ಈಡೇರಿಸಬೇಕಾದ ಬೇಡಿಕೆಗಳಿಗೆ ಸರಕಾರವನ್ನು ಒತ್ತಾಯಿಸುವ ಹೋರಾಟವಾಗಿ ಪರಿವರ್ತನೆಗೊಳಿಸಬೇಕಾಗಿದೆ ಜಿಲ್ಲೆಯ ಯುವಜನರು ಐಕ್ಯತೆಯಲ್ಲಿ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.


ಸಮಾವೇಶಕ್ಕೆ ಭಾಗವಹಿಸಿ ಶುಭಕೋರಿ ಮಾತನಾಡಿದ ಅನಿ ಮಂಗಳೂರು ಅವರು, ಕೇವಲ ಯುವತಿಯರು, ಯುವಕರು ಮಾತ್ರ ಅಲ್ಲ ಮಂಗಳಮುಖಿಯರಾದ ನಮಗೂ ಕೂಡ ಕೆಲಸದ ಅವಶ್ಯಕತೆ ಇದೆ. ಮಂಗಳಮುಖಿಯರ ಶಿಕ್ಷಣ ಮತ್ತು ಉದ್ಯೋಗಕ್ಕೆ ಡಿವೈಎಫ್‌ಐ ಬೆಂಬಲಿಸುತ್ತಿರುವು ಖುಷಿ ತಂದಿದೆ. ನಾವೂ ಡಿವೈಎಫ್‌ಐ ನಡೆಸುವ ಈ ಹೋರಾಟದ ಜೊತೆಯಾಗಲಿರುವೆವು ಎಂದರು. 

ಸಮಾವೇಶದಲ್ಲಿ ನೂತನ ಸಮಿತಿಯನ್ನು ಆಯ್ಕೆಮಾಡಲಾಯಿತು. ಅದ್ಯಕ್ಷರಾಗಿ ನವೀನ್ ಕೊಂಚಾಡಿ, ಕಾರ್ಯದರ್ಶಿಯಾಗಿ ತಯ್ಯೂಬ್ ಬೆಂಗರೆ, ಕೋಶಾಧಿಕಾರಿಯಾಗಿ, ಅಡ್ವಕೇಟ್ ಚರಣ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜಗದೀಶ್ ಬಜಾಲ್, ಕ್ರೀಡಾ ಕಾರ್ಯದರ್ಶಿಯಾಗಿ ಪುನೀತ್ ಉರ್ವಸ್ಟೋರ್ ಸಹಿತ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಸಮಾವೇಶದ ಅಧ್ಯಕ್ಷತೆಯನ್ನು ಮಂಗಳೂರು ನಗರ ಅಧ್ಯಕ್ಷ ಜಗದೀಶ್ ಬಜಾಲ್ ವಹಿಸಿದ್ದರು. ನವೀನ್ ಕೊಂಚಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಸಿದರು. ಜಿಲ್ಲಾ ಮುಖಂಡರಾದ ಮಾಧುರಿ ಬೋಳಾರ್, ನಿತಿನ್ ಕುತ್ತಾರ್, ತಯ್ಯೂಬ್ ಬೆಂಗ್ರೆ ಉಪಸ್ಥಿತರಿದ್ದರು.

ಕೊನೆಗೆ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಯುವಜನ ಜಾಥಾದ ಬೇಡಿಕೆಗಳಿರುವ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article