
ಸಂಘನಿಕೇತನ ಶ್ರೀ ಗಣೇಶೋತ್ಸವದ ಶೋಭಾಯಾತ್ರೆ
ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್, ಉಪಾಧ್ಯಕ್ಷ ಎಂ. ಸತೀಶ್ ಪ್ರಭು, ಪದಾಽಕಾರಿಗಳಾದ ಸುರೇಶ್ ಕಾಮತ್, ನಂದನ್ ಮಲ್ಯ, ಗಜಾನನ ಪೈ, ಬಾಲಕೃಷ್ಣ ಕೊಟ್ಟಾರಿ, ಜೆ.ಕೆ.ರಾವ್, ಆನಂದ ಪಾಂಗಾಳ, ಕೆ.ಪಿ. ಟೈಲರ್, ತರುಣ್ ಕೆ. ಥಾಖರ್, ಸ್ಮಿತಾ ಎಂ.ಜಿ., ಸ್ವಾಮಿ ಪ್ರಸಾದ್, ಕೆ. ಜೀವನ್‌ರಾಜ್ ಶೆಣೈ, ಅಭಿಷೇಕ್ ಭಂಡಾರಿ, ಗಣೇಶ್ ಪ್ರಸಾದ್, ಪೂರ್ಣಿಮಾ ಶೆಣೈ, ಎಸ್. ಆರ್. ಕುಡ್ವ, ಜಯಪ್ರಕಾಶ್ ಮಂಗಳಾದೇವಿ ಮತ್ತಿತರರು ಉಪಸ್ಥಿತರಿದ್ದರು.
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಅವರು ಯಾವ ಉದ್ದೇಶವನ್ನು ಇರಿಸಿಕೊಂಡು ಧಾರ್ಮಿಕ ಜಾಗೃತಿಯ ಮೂಲಕ ರಾಷ್ಟ್ರೀಯ ಚಿಂತನೆಯನ್ನು ಜನರಲ್ಲಿ ಮೂಡಿಸಲು ಸಾರ್ವಜನಿಕ ಶ್ರೀ ಗಣೇಶೋತ್ಸವನ್ನು ಪ್ರಾರಂಭಿಸಿದ್ದರೋ ಅದೇ ಪ್ರೇರಣೆಯಿಂದ, ಅದೇ ಉದ್ದೇಶದಿಂದ ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ಪ್ರತಿ ವರ್ಷ ಶ್ರೀ ಗಣೇಶೋತ್ಸವ ಆಚರಿಸಲಾಗುತ್ತಿದೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾಗಿ:
ಶೋಭಾಯಾತ್ರೆಗೆ ಮುನ್ನ ಸಂಘನಿಕೇತನಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಿತಿಯ ವತಿಯಿಂದ ವಿಜಯೇಂದ್ರ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಈ ಸಂದರ್ಭ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಡಿ.ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ಯುವಮೋಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.