ರಸ್ತೆ ಅಪಘಾತ ಮತ್ತು ಅಪರಾಧ ಪ್ರಕರಣಗಳಲ್ಲಿ ಇಳಿಕೆ: ರವಿಶಂಕರ್

ರಸ್ತೆ ಅಪಘಾತ ಮತ್ತು ಅಪರಾಧ ಪ್ರಕರಣಗಳಲ್ಲಿ ಇಳಿಕೆ: ರವಿಶಂಕರ್


ಮಂಗಳೂರು: ಕಳೆದ ಒಂದು ವರ್ಷದ ಅಂಕಿಅಂಶಗಳನ್ನು ಗಮನಿಸಿದಾಗ ರಸ್ತೆ ಅಪಘಾತ ಮತ್ತು ಅಪರಾಧ ಪ್ರಕರಣಗಳಲ್ಲಿ ಸಾಕಷ್ಟು ಇಳಿಕೆಯಾಗಿರುವುದು ಉತ್ತಮ ಬೆಳವಣಿಗೆ ಎಂದು ಮಂಗಳೂರು ಉಪ ಪೊಲೀಸ್ ಆಯುಕ್ತ ರವಿಶಂಕರ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಹಾಗೂ ದಕ್ಷಿಣ ಕನ್ನಡ ಬಸ್ ಮಾಲಕರ ಸಂಘದ ವತಿಯಿಂದ ಮಂಗಳೂರು ಪತ್ರಿಕಾ ಭವನದಲ್ಲಿ ಗುರುವಾರ ಉಚಿತ ಖಾಸಗಿ ಬಸ್ ಪಾಸ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಪತ್ರಕರ್ತರು ತಮ್ಮ ವೃತ್ತಿ ಬದುಕಿನಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸು ತ್ತಿದ್ದಾರೆ.ಈ ನಡುವೆ ಸತ್ಯ ಮತ್ತು ನ್ಯಾಯ ಪರದ ಜೊತೆ ಸಮಾಜದ ಧ್ವನಿಯಾಗಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ. ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ವರದಿಗಳ ಬಗ್ಗೆಯೂ ಸಾಕಷ್ಟು ಎಚ್ಚರಿಕೆ ವಹಿಸಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಪತ್ರಕರ್ತರ ಹೊಣೆಗಾರಿಕೆ ಶ್ಲಾಘನೀಯ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆರ್ ಟಿಒ ಶ್ರೀಧರ್ ಮಾತನಾಡುತ್ತಾ,ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಯೊಂದಿಗೆ ಚಾಲನೆ ಮಾಡುವುದು ಮುಖ್ಯ. ಜೊತೆಗೆ ಅಪಘಾತ ರಹಿತ ಚಾಲನೆಯೂ ಉತ್ತಮ ಮಾದರಿ ಎಂದು ಶುಭ ಹಾರೈಸಿ ದರು.ದಕ್ಷಿಣ  ದಕ್ಷಿಣ ಕನ್ನಡ ಬಸ್ ಮಾಲಕರ ಸಂಘದ ಅಧ್ಯಕ್ಷ ಅಜೀಜ್ ಪರ್ತಿಪ್ಪಾಡಿ ಮಾತನಾಡುತ್ತಾ, ಜಿಲ್ಲೆಯ ಪತ್ರಕರ್ತರ ಸಮಾಜ ಮುಖಿ ಚಟುವ ಟಿಕೆಗಳು ಮತ್ತು ಅವರ ವೃತ್ತಿ ನಿಷ್ಠೆಯ ಬಗ್ಗೆ ಗೌರವವಿದೆ.ಆ ಕಾರಣದಿಂದ ನಮ್ಮ ಸ್ವ ಆಸಕ್ತಿಯಿಂದ ಅವರಿಗೆ ಉಚಿತ ಬಸ್ ಪಾಸ್ ನೀಡಲು ಮುಂದೆ ಬಂದಿರುವುದಾಗಿ ತಿಳಿಸಿದರು..

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,  ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ,ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ  ಅನ್ನು ಮಂಗಳೂರು, ಬಸ್ ಮಾಲಕರ ಸಂಘದ ಉಪಾಧ್ಯಕ್ಷ ರಾಮಚಂದ್ರ ನಾಯಕ್,ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್,ಜೊತೆ ಕಾರ್ಯದರ್ಶಿ ರಾಜೇಶ್ ಟಿ,ಪೂರ್ವಾಧ್ಯಕ್ಷ ನೆಲ್ಸನ್ ಪಿರೇರಾ,ಪದಾಧಿಕಾರಿಗಳಾದ ಸಂಜ್ಯೋತಿ ಶೇಖ,   ಮೊಹಿಸಿನ್ ನವಾಬ್, ಪವನ್ ಕುಮಾರ್,ಸುಚೇತನಾ ಕಾವೂರು, ಚಂದ್ರಕಲಾ,ಇಸ್ಮಾಯಿಲ್(ಇಚ್ಚಾಲಿ),,ಚಂದ್ರನ್,ಇಮ್ತಿಯಾಝ್,ರಂಜಿತ್,ರೋಶನ್ ಸಲ್ದಾನ,ಜಾಯ್ ರೋಡ್ರಿಗಸ್, ಆ?ಯರೋನ್, ರಾಜ್ ಕುಮಾರ್,ಜಯಂತ್ ಕುಮಾರ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಅಪಘಾತ ರಹಿತ ಚಾಲನೆ  ಮಾಡಿದ ಚಾಲಕರಾದ ಧರ್ಮಪಾಲ ಉಳ್ಳಾಲ್,ಮೋಹನ್ ಮತ್ತು ಅರುಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.      ಶ,ಪ್ರಧಾನ ಕಾರ್ಯ ದರ್ಶಿ  ಜಿತೇಂದ್ರ ಕುಂದೇಶ್ವರ ವಂದಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article