ಶ್ರೀ ಇಟಲ ಗೆಳೆಯರ ಬಳಗದಿಂದ 15ನೇ ವಷ೯ದ ಮೊಸರು ಕುಡಿಕೆ ಉತ್ಸವ: ನೂತನ ರಂಗಮಂದಿರ ಲೋಕಾಪ೯ಣೆ

ಶ್ರೀ ಇಟಲ ಗೆಳೆಯರ ಬಳಗದಿಂದ 15ನೇ ವಷ೯ದ ಮೊಸರು ಕುಡಿಕೆ ಉತ್ಸವ: ನೂತನ ರಂಗಮಂದಿರ ಲೋಕಾಪ೯ಣೆ


ಮೂಡುಬಿದಿರೆ: ಶ್ರೀ ಇಟಲ ಗೆಳೆಯರ ಬಳಗ ಪಣಪಿಲ ಇವರ ವತಿಯಿಂದ 15ನೇ ವರ್ಷದ ಮೊಸರು ಕುಡಿಕೆ ಉತ್ಸವದಂಗವಾಗಿ ಮುದ್ದುಕೃಷ್ಣ ಸ್ಪಧೆ೯ ಹಾಗೂ ವಿವಿಧ ಆಟೋಟ, ಸಾಂಸ್ಕೃತಿಕ ಸ್ಪಧೆ೯ಗಳು ಭಾನುವಾರ ನಡೆಯಿತು.

ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ಕಾಯ೯ಕ್ರಮವನ್ನು ಉದ್ಘಾಟಿಸಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಹಾಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರ ಅನುದಾನದೊಂದಿಗೆ ನಿರ್ಮಿಸಿದ ನೂತನ ರಂಗಮಂದಿರವನ್ನು ಲೋಕಾಪ೯ಣೆಗೊಳಿಸಿದರು.  


ನಂತರ ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ  ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.  

ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು,ಬಿಜೆಪಿ ಮುಖಂಡ ಕೆ. ಪಿ. ಜಗದೀಶ ಅಧಿಕಾರಿ, ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್,  ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ,  ಜೆಡಿಎಸ್ ಮುಖಂಡೆ ಅಮರಶ್ರೀ ಅಮರನಾಥ ಶೆಟ್ಟಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುದಶ೯ನ್ ಎಂ., ಪಣಪಿಲ ಅರಮನೆಯ ಭರತ್ ಕುಮಾರ್ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಪಂಚಾಯತ್ ಸದಸ್ಯರಾದ ಮುನಿರಾಜ್ ಹೆಗ್ಡೆ ದೀಕ್ಷಿತ್ ಪಣಪಿಲ, ತುಳಸಿ ಮೂಲ್ಯ, ಜನಿತ ಕೆ., ಸಂತೋಷ್ ಪೂಜಾರಿ,   ಸೇರಿದಂತೆ ವಿವಿಧ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article