
ಮೂಡು ಮಾರ್ನಾಡು ಶ್ರೀ ವಿಘ್ನೇಶ್ವರ ಭಜನಾ ಮಂದಿರದಲ್ಲಿ 16ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ
ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ನ ಅಧ್ಯಕ್ಷ ದೇವರಾಜ್ ಸುವರ್ಣ ಪೊಸಲಾಯಿ ಅವರು ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ನ್ಯಾಯವಾದಿ ಸಹನಾ ಕುಂದರ್ ಸೂಡ ಧಾರ್ಮಿಕ ಉಪನ್ಯಾಸ ನೀಡಿದರು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ದಾಖಲಿಸಿದ ಗ್ರಾಮದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಮಾಜಿ ಸಚಿವ ಕೆ ಅಭಯಚಂದ್ರ, ಶಾಸಕ ಉಮಾನಾಥ ಏ. ಕೋಟ್ಯಾನ್, ಬಿಳುವಾಯಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಭಾಸ್ಕರ ಕೋಟ್ಯಾನ್, ರಾಯರ ಮನೆ ಹೇಮರಾಜ್ ರಾವ್, ನ್ಯಾಯವಾದಿ ಸುರೇಶ್ ಕೆ ಪೂಜಾರಿ, ಉದ್ಯಮಿಗಳಾದ ಪೂರ್ಣಚಂದ್ರ ರಾಜೇಶ್ ಎಂ ಕೋಟ್ಯಾನ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹರ್ಷವರ್ಧನ ಪಡಿವಾಳ, ಪಡುಮಾರ್ನಾಡು ಪಂಚಾಯತ್ ಅಧ್ಯಕ್ಷ ವಾಸುದೇವ ಭಟ್, ಚಂದ್ರಹಾಸ ಸನಿಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪಂಚಾಯತ್ ಮಾಜಿ ಅಧ್ಯಕ್ಷ ಕಲ್ಯಾಣಿ, ಸದಸ್ಯ ರಾಜೇಶ್ ಪೆರ್ನ್ಕಾಡಿ, ಹಿತ್ತಿಲು ಮನೆ ಶೇಖರ ಪೂಜಾರಿ, ಉದ್ಯಮಿ ಕುಮಾರ್ ಪೂಜಾರಿ, ಸುಕುಮಾರ ಜೈನ್ ಬನ್ನಡ್ಕ, ವಿಘ್ನೇಶ್ವರ ಭಜನಾ ಮಂಡಳಿ ಅಧ್ಯಕ್ಷ ರಾಘು ಪೂಜಾರಿ, ಚೇತನ ಯುವಕ ಮಂಡಲ ಅಧ್ಯಕ್ಷ ಸುನಿಲ್, ವಿಘ್ನೇಶ್ವರ ಫ್ರೆಂಡ್ಸ್ ಟ್ರಸ್ಟ್ ಅಧ್ಯಕ್ಷ ಆಶಿಶ್ ಸಾಲ್ಯಾನ್, ವಿಘ್ನೇಶ್ವರ ಮಹಿಳಾ ಮಂಡಳಿ ಅಧ್ಯಕ್ಷೆ ಅಶ್ವಿನಿ, ಬೆಳುವಾಯಿ ಸಹಕಾರಿ ಸಂಘದ ಅಲಂಗಾರ್ ಶಾಖೆ ವ್ಯವಸ್ಥಾಪಕ ಸತೀಶ್ ಶೆಟ್ಟಿ, ಭಜನಾ ಮಂಡಳಿ ಅಧ್ಯಕ್ಷ ಅರ್ಚಕ ಓಬಯ್ಯ ಸುವರ್ಣ, ಟ್ರಸ್ಟ್ ಗೌರವಾಧ್ಯಕ್ಷ ಜನಾರ್ಧನ ರಾವ್ ಪಾಡಿಮನೆ ಮತ್ತಿತರರು ವೇದಿಕೆಯಲ್ಲಿದ್ದರು.
ಸುರೇಖಾ ಪ್ರಾರ್ಥನೆ ನೆರವೇರಿಸಿದರು. ಜನಾರ್ಧನ ರಾವ್ ಸ್ವಾಗತಿಸಿದರು. ಹರಿದೀಪ್ ದಾನಿಗಳ ಪಟ್ಟಿ ವಾಚಿಸಿದರು. ರಾಮ್ ಕುಮಾರ್, ನಿತೇಶ್ ಮಾರ್ನಾಡ್, ಹರೀಶ್ ಸನ್ಮಾನ ಪತ್ರ ವಾಚಿಸಿದರು. ದಿನಕರ ಅಮೀನ್ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ರಾಜೇಶ್ ಗೋಲಾರ ವಂದಿಸಿದರು.
ನವೀನ್ ಬಂಗೇರ ಕಾಯ೯ಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಮಹಾಪೂಜೆ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು. ಸಾಯಂಕಾಲ ರಂಗ ಪೂಜೆ ಮಹಾಪೂಜೆ, ಬಳಿಕ ಗಣಪತಿ ದೇವರ ವಿಗ್ರಹದ ವೈಭವಯುತ ಮೆರವಣಿಗೆಯೊಂದಿಗೆ ಜಲ ಸ್ತಂಭನ ನಡೆಯಲಿದೆ.