
ಮೂಡುಬಿದಿರೆ: 62ನೇ ವಷ೯ದ ಸಾವ೯ಜನಿಕ ಶ್ರೀ ಗಣೇಶೋತ್ಸವ ಸಾಂಸ್ಕೃತಿಕ ಕಾಯ೯ಕ್ರಮಕ್ಕೆ ಚಾಲನೆ
Wednesday, August 27, 2025
ಮೂಡುಬಿದಿರೆ: ಇಲ್ಲಿನ ಸಾವ೯ಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ವತಿಯಿಂದ ಸಮಾಜಮಂದಿರದಲ್ಲಿ ನಡೆಯುತ್ತಿರುವ 62 ನೇ ವರ್ಷದ ಗಣೇಶೋತ್ಸವದಂಗವಾಗಿ ಪ್ರತಿದಿನ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ರಂಗ ನಿರ್ದೇಶಕ ಜೀವನರಾಮ್ ಸುಳ್ಯ ಅವರು ಬುಧವಾರ ಚಾಲನೆ ನೀಡಿದರು.
ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಗಣೇಶೋತ್ಸವ ಟ್ರಸ್ಟ್ ಅಧ್ಯಕ್ಷ ನಾರಾಯಣ ಪಿ.ಎಂ, ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ, ಹರೀಶ್ ಎಂ.ಕೆ,ರಾಜಾರಾಮ್ ನಾಗರಕಟ್ಟೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.