
ಕಾರಂತರ ಕಾದಂಬರಿಗಳಲ್ಲಿದೆ ಜೀವನದ ಮೌಲ್ಯ: ಡಾ. ಬಿ. ಜನಾರ್ದನ ಭಟ್
ಅವರು ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ವತಿಯಿಂದ ಆಳ್ವಾಸ್ ಕಾಲೇಜು (ಸ್ವಾಯತ್ತ) ಮೂಡುಬಿದಿರೆ ಇದರ ಸಹಯೋಗದಲ್ಲಿ ಕಾಲೇಜಿನ (ಸ್ವಾಯತ್ತ) ಎ.ವಿ ಸಭಾಂಗಣದಲ್ಲಿ ನಡೆದ ಡಾ.ಶಿವರಾಮ ಕಾರಂತರ ಕೃತಿಗಳ ಸ್ವರೂಪ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ವೈಚಾರಿಕ ಹಾಗೂ ವೈಜ್ಞಾನಿಕ ಪ್ರಜ್ಞೆಯನ್ನು ಕಾರಂತರ ಎಲ್ಲಾ ಬರವಣಿಗೆಯಲ್ಲಿ ಕಾಣಬಹುದಾಗಿದ್ದು, ಸಂವಿಧಾನದ ಸಮಾನತೆಯ ತತ್ವಗಳನ್ನು ಕಾರಂತರು ತಮ್ಮ ಕಾದಂಬರಿಗಳಲ್ಲಿ ಪ್ರತಿಪಾದಿಸಿದರು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಖ್ಯಾತ ಕತೆಗಾರ ಮತ್ತು ಸಾಹಿತಿ ಪ್ರೊ ಹರೀಶ್ ಟಿ. ಜಿ ಉಪನ್ಯಾಸ ನೀಡಿ, ಕಾರಂತರ ಕಾದಂಬರಿ ಮತ್ತು ಕತೆಗಳನ್ನು ಕೇಂದ್ರವಾಗಿಟ್ಟುಕೊಂಡು ಕಥಾ ಸಾಹಿತ್ಯದ ಸ್ವರೂಪವನ್ನು ವಿವರಿಸಿದರು.
ಕಾರ್ಯಕ್ರಮದ ಅಧಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ವಹಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಯೋಗಿಶ್ ಕೈರೋಡಿ ವಂದಿಸಿದರು.