ಆ. 29ರಂದು ಮಂಗಳಾಪುರಂ ಕನ್ನಡ ಚಿತ್ರದ ಮುಹೂರ್ತ

ಆ. 29ರಂದು ಮಂಗಳಾಪುರಂ ಕನ್ನಡ ಚಿತ್ರದ ಮುಹೂರ್ತ

ಮೂಡುಬಿದಿರೆ: ಶ್ರೀ ವಾರಾಹಿ ಕ್ರಿಯೇಷನ್ ಅಡಿಯಲ್ಲಿ ವಿದ್ವಾನ್ ಪ್ರಸನ್ನ ತಂತ್ರಿ ಮೂಡುಬಿದಿರೆ, ರಾಮ್ ಪ್ರಸಾದ್ ನಿರ್ಮಾಣ, ರಂಜಿತ್ ರಾಜ್ ಸುವರ್ಣ ನಿರ್ದೇಶನದ ಮಂಗಳಾಪುರಂ ಕನ್ನಡ ಚಿತ್ರದ ಮುಹೂರ್ತ ಸಮಾರಂಭವು ಆ.29ರಂದು 9.30ಕ್ಕೆ ಅಲಂಗಾರು ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನೆರವೇರಲಿದೆ ಎಂದು ಚಿತ್ರದ ನಿರ್ಮಾಪಕ ಪ್ರಸನ್ನ ತಂತ್ರಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೂಡುಬಿದಿರೆ ಜೈನಮಠದ ಡಾ.ಸ್ವಸ್ತಿಶ್ರಿ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮಿಜಿ ಅವರು ಕ್ಯಾಮರ ಚಾಲನೆ ಮಾಡಲಿರುವರು, ಡಾ. ಎಂ ಮೋಹನ ಆಳ್ವ ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದಾರೆ.

ಉದ್ಯಮಿ ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ ಎಂ., ರಿಷಿಕೇಶ್ ಕುಂಬ್ಳೆ, ಚಂದ್ರಶೇಖರ ರಾವ್, ದೇವದಾಸ್ ಕಾಪಿಕಾಡ್, ದೇವಾನಂದ ಭಟ್, ಸುಬ್ರಮಣ್ಯ ಭಟ್, ವಿಜಯ ಕುಮಾರ್ ಕೊಡಿಯಾಲ್ ಬೈಲ್, ಅನಿಲ್ ಕಾವೂರು, ಪ್ರಕಾಶ್ ಪಾಂಡೇಶ್ವರ ಮುಖ್ಯ ಅತಿಥಿಗಳಾಗಿರುವರು ಎಂದರು.

ನಿರ್ದೇಶಕ ರಂಜಿತ್ ರಾಜ್ ಸುವರ್ಣ ಮಾಹಿತಿ ನೀಡಿ, ಮುಖ್ಯ ಭೂಮಿಕೆಯಲ್ಲಿ ರಿಷಿ ಹಾಗೂ ಅಭಿಮನ್ಯು ಕಾಶಿನಾಥ್ ಅಭಿನಯಿಸಲಿದ್ದು, ನಾಯಕಿಯಾಗಿ ಗೌತಮಿ ಜಾದವ್ ಅಭಿನಯಿಸಲಿದ್ದಾರೆ. ಉಳಿದಂತೆ ಪ್ರಮುಖ ಕಲಾವಿದರಾದ ಪ್ರಕಾಶ್ ಬೆಳವಾಡಿ, ವೈಜನಾಥ್ ಬಿರಾದರ್, ದೀಪಕ್ ರೈ. ಅವಿನಾಶ್, ಪುಷ್ಪರಾಜ್ ಬೋಳಾರ್, ದೇವದಾಸ್ ಕಾಪಿಕಾಡ್, ಮೈಮ್ ರಾಮದಾಸ್, ಮುಂತಾದವರು ಅಭಿನಯಿಸಲಿರುವರು .ಚಿತ್ರದ ಚಿತ್ರೀಕರಣ, ನಾರಾವಿ, ಮಾರ್ನಾಡು, ಬಂಗಾಡಿ ಬೈಲೂರು, ಬೆಳ್ತಂಗಡಿ, ಕೇರಳ ಸುತ್ತಮುತ್ತ 60 ದಿನಗಳ ಕಾಲ ನಡೆಯಲಿದೆ. ಚಿತ್ರಕ್ಕೆ ಅಭಿಷೇಕ್ ಕಾಸರಗೂಡು-ಛಾಯಾಗ್ರಹಣ ಅನೂಪ್ ಸೀಳೀನ್-ಸಂಗೀತ ನಿರ್ದೇಶಕ ಮಾಡಲಿರುವರು ಎಂದರು.

ನಿರ್ಮಾಪಕ ರಾಮ್ ಪ್ರಸಾದ್, ಯಕ್ಷಗಾನ ಕಲಾವಿದ ಎಂ.ದೇವಾನಂದ ಭಟ್ ಸುದ್ದಿಗೋಷ್ಠಿಯಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article