
ಕಲ್ಲಬೆಟ್ಟು ಸ್ವಣ೯ಗೌರಿ ಮಾತೃ ಮಂಡಳಿಯ ವಾಷಿ೯ಕೋತ್ಸವ: ಭಾರತ ಮಾತಾ ಪೂಜನ ಕಾಯ೯ಕ್ರಮ
Thursday, August 28, 2025
ಮೂಡುಬಿದಿರೆ: ಗೌರಿ ಗಣೇಶ ಹಬ್ಬದ ಪ್ರಯುಕ್ತ ಸ್ವಣ೯ಗೌರಿ ಮಾತೃ ಮಂಡಳಿ ಕಲ್ಲಬೆಟ್ಟು-ಕರಿಂಜೆ-ಮಾರೂರು ಹಾಗೂ ಹಿಂದು ಸೇವಾ ಪ್ರತಿಷ್ಠಾನ ಇದರ ಸಹಯೋಗದಲ್ಲಿ ವಾಷಿ೯ಕೋತ್ಸವ ಮತ್ತು ಭಾರತ ಮಾತಾ ಪೂಜನ ಕಾಯ೯ಕ್ರಮ ಕಲ್ಲಬೆಟ್ಟುವಿನ ಶ್ರೀ ಗಣೇಶ ಸೇವಾಧಾಮದಲ್ಲಿ ಮಂಗಳವಾರ ನಡೆಯಿತು.
ಶ್ರೀ ಗಣೇಶ ಸೇವಾ ಟ್ರಸ್ಟ್ ನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅವರು ಕಾಯ೯ಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮಂಗಳೂರು ವಿಭಾಗ ಗ್ರಾಮ ವಿಕಾಸ ಟೋಳಿ ಸದಸ್ಯೆ ರಮಿತಾ ಶೈಲೇಂದ್ರ ಕಾಕ೯ಳ ಅವರು ವಿಶೇಷ ಉಪನ್ಯಾಸ ನೀಡಿದರು.
ಮಾತೃ ಮಂಡಳಿಯ ಅಧ್ಯಕ್ಷೆ ಪ್ರಿಯಾಂಕ ರಂಜಿತ್ ಬಮ೯ನ್ ಅವರ ಅಧ್ಯಕ್ಷತೆಯಲ್ಲಿ ಸೂಲಗಿತ್ತಿ ಮುತ್ತು ಪೂಜಾರ್ತಿ ತಿಮರಕೋಡಿ ಅವರನ್ನು ಸನ್ಮಾನಿಸಲಾಯಿತು.
ಗೌರವಾಧ್ಯಕ್ಷೆ ಶಕುಂತಲಾ ರಾಮಚಂದ್ರ ರಾವ್ ಕೊಡಂಗಲ್ಲು, ಉಪಾಧ್ಯಕ್ಷೆ ವೀಣಾ ಸುರೇಶ್ ಪೈ, ಕಾಯ೯ದಶಿ೯ ಸೋನಿಕಾ ಕೇಶವ ಹೆಗ್ಡೆ, ಸಂಚಾಲಕಿ ಮಲ್ಲಿಕಾ ಜೆ. ಸಾಲ್ಯಾನ್ ಹಾಗೂ ಕಾಯ೯ಕಾರಿಣಿ ಸದಸ್ಯರು ಈ ಸಂದಭ೯ದಲ್ಲಿದ್ದರು.
ನಂತರ ಶಾಲಾ ಮಕ್ಕಳಿಗೆ ಮತ್ತು ಮಾತೃ ಮಂಡಳಿಯ ಸದಸ್ಯೆಯರಿಂದ ಸಾಂಸ್ಕೃತಿಕ ಕಾಯ೯ಕ್ರಮಗಳು ನಡೆದವು.