
ಅಚಲವಾದ ನಂಬಿಕೆಯಿದ್ದರೆ ದೇವರ ಸಾಕ್ಷಾತ್ಕಾರ ಸಾಧ್ಯ: ಕಲ್ಲಬೆಟ್ಟು ಗಣೇಶೋತ್ಸವದಲ್ಲಿ ವಾದಿರಾಜರ ಆಶಯ
ಶ್ರೀ ಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅವರು ಮಾತನಾಡಿ ಸಮಾಜದಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ಬೆಳೆಯುವಲ್ಲಿ ಮಹಿಳಾ ಶಕ್ತಿಯ ಭೂಮಿಗೆ ಪ್ರಧಾನವಾಗಿದ್ದು ಕಲ್ಲಬೆಟ್ಟು ಗಣೇಶೋತ್ಸವದಲ್ಲಿ ಮಾತ್ರ ಸ್ವರ್ಣಗೌರಿ ಮಾತೃಮಂಡಳಿಯ ಮೂಲಕ ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಕಾರ್ಯ ನಡೆಯುತ್ತಿದೆ. ಮುಂದಿನ ವರ್ಷ ಕಲ್ಲಬೆಟ್ಟು ಗಣೇಶೋತ್ಸವ ರಜತ ಮಹೋತ್ಸವ ವರ್ಷಾಚರಣೆ ಆಚರಿಸಲಿದ್ದು ಈ ಸಂದರ್ಭ ರೂ. 1.50 ಕೋಟಿ ವೆಚ್ಚದಲ್ಲಿ ಟ್ರಸ್ಟ್ ವತಿಯಿಂದ ಗಣೇಶೋತ್ಸವದ ಕಟ್ಟಡ ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಜವುಳಿ ಉದ್ಯಮಿ ರಾಜೇಂದ್ರ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಬಹುಮಾನ ವಿತರಿಸಿದ ಮೂಡುಬಿದಿರೆ ಮಾತನಾಡಿ ಮಕ್ಕಳಿಗೆ ಉತ್ತಮ ಸಂಸ್ಕಾರ ಬೆಳೆಸುವ ಮೂಲಕ ಸಂಸ್ಕೃತಿಯನ್ನು ಉಳಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಸ್ವರ್ಣಗೌರಿ ಮಾತೃಮಂಡಳಿ ಅಧ್ಯಕ್ಷೆ ಪ್ರಿಯಾಂಕಾ ರಂಜಿತ್ ಬರ್ಮನ್ ಉಪಸ್ಥಿತರಿದ್ದರು. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುಬ್ರಹ್ಮಣ್ಯ ಮೊಗೆರಾಯ, ಹಾಸ್ಯ ಕಲಾವಿದೆ, ಪ್ರಗತಿಪರ ಕೃಷಿಕ ಚಾರಪ್ಪ ಪೂಜಾರಿ ಮಾರೂರು ಅವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. సి.ఇ.టి. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಶಿಶಿರ್ ಎಚ್. ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅನಘಾ ಕಾಮತ್ ಮತ್ತು ಡಿ.ಜೆ. ಅಂಗ್ಲಮಾಧ್ಯಮ ಶಾಲೆಯ ತ್ರಿಷಾ ಸತೀಶ್ ಶೆಟ್ಟಿಯವರನ್ನು ವಿಶೇಷವಾಗಿ ಪುರಸ್ಕರಿಸಲಾಯಿತು. ಪ್ರತೀ ಶಾಲೆಯ ಎಸ್ಸೆಸ್ಸೆಲ್ಸಿ ಮತ್ತು ಪಿ.ಯು.ಸಿ, ಟಾಪರ್ ಗಳನ್ನು ಪುರಸ್ಕರಿಸಲಾಯಿತು.
ವಿಶಾಲ್ ಮಾರೂರು ಸ್ವಾಗತಿಸಿದರು. ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಗೋಪಾಲಕೃಷ್ಣ ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟು ಬಹುಮಾನಿತರ ಹೆಸರು ವಾಚಿಸಿದರು. ಬೆಳುವಾಯಿ ಮಂಜುನಾಥ ಶೆಟ್ಟಿ ಪ್ರಕೃತಿ ವಂದನಾ ಕಾರ್ಯಕ್ರಮದ ವಿವರ ನೀಡಿದರು.
ಅಕ್ಷತಾ ಆರ್. ಸನ್ಮಾನಪತ್ರ ವಾಚಿಸಿದರು. ಕೀರ್ತಿ ರಾಘವೇಂದ್ರ ಮತ್ತು ಸೌಜನ್ಯಾ ರಾಜೇಶ್ ಬೈಲೂರು ಪ್ರಾರ್ಥಿಸಿದರು. ಅಕ್ಷತಾ ಜಿ.ಕೆ. ಮತ್ತು ಚಿತ್ರಾ ಕಾರ್ಯಕ್ರಮ ನಿರೂಪಿಸಿದರು. ಸುಧೀರ್ ಪೈ ವಂದಿಸಿದರು. ರಮೇಶ್ಚಂದ್ರ ಪಿ. ಸಹಕರಿಸಿದರು.