
ಇರುವೈಲು ಗಣೇಶೋತ್ಸವ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷೆ ಸುಜಾತ ಜೆ ಶೆಟ್ಟಿಗೆ ಸನ್ಮಾನ
Thursday, August 28, 2025
ಮೂಡುಬಿದಿರೆ: ಫ್ರೆಂಡ್ಸ್ ಕ್ಲಬ್ ರಿ. ಇರುವೈಲು ಇವರ ವತಿಯಿಂದ ನಡೆದ ಹದಿನಾಲ್ಕನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾಮಿ೯ಕ ಕಾಯ೯ಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲ್ಯಾನ್, ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷೆ ಸ್ಥಾನಕ್ಕೆ ಆಯ್ಕೆಯಾಗಿರುವ ಸುಜಾತಾ ಜೆ.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ಕೆ.ಅಭಯಚಂದ್ರ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಪದ್ಮರಾಜ್ ರಾಮಯ್ಯ, ತಿಮ್ಮಯ್ಯ ಶೆಟ್ಟಿ, ವಿವೇಕ್ ಆಳ್ವ,ಚಂದ್ರಹಾಸ ಸನಿಲ್, ಅನೀಶ್ ಬೆಳುವಾಯಿ, ಶೇಖರ್ ಬೊಳ್ಳಿ,ಕುಮಾರ್ ಪೂಜಾರಿ, ವೆಂಕಟೇಶ್ ಪೂಜಾರಿ ಗುಜರಾತ್ ಮತ್ತಿತರರು ಭಾಗವಹಿಸಿದ್ದರು.
ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಪೂಜಾರಿ ದೇವರಗುಡ್ಡೆ, ಕಾರ್ಯದರ್ಶಿ ಪ್ರಶಾಂತ್ ಅಮೀನ್, ಕೋಶಾಧಿಕಾರಿ ಕಿಶೋರ್ ಕುಮಾರ್, ಪದಾಧಿಕಾರಿಗಳಾದ ಪ್ರವೀಣ್, ಭರತ್ ಶೆಟ್ಟಿ, ದಿನೇಶ್ ಪ್ರಭು, ಪ್ರದೀಪ್ ಶೆಟ್ಟಿ, ಯಶೋಧರ್, ರಾಜ್ ಕುಮಾರ್, ಸಂತೋಷ್ ಪೂಜಾರಿ, ನಿತಿನ್, ಲೋಕೇಶ್ ಭಂಡಾರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇರುವೈಲು ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಅಸ್ರಣ್ಣ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆದವು.
ಸಂಜೆ ವಿಸರ್ಜನಾ ಮೆರವಣಿಗೆಯೊಂದಿಗೆ ಗಣಪತಿಯನ್ನು ಜಲಸ್ತಂಭನಗೊಳಿಸಲಾಯಿತು.