
ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ವಿಜ್ಞಾನ ಮೇಳ
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ, ವಕೀಲ ಕೆ.ಆರ್ ಪಂಡಿತ್ ಅಧ್ಯಕ್ಷತೆವಹಿಸಿದರು. ಕೋಡ್ ಕ್ರಾಫ್ಟ್ ಟೆಕ್ನಾಲಜಿಸ್‌ನ ಸಹ ಸಂಸ್ಥಾಪಕ ಪ್ರವೀಣ್ ಕ್ಯಾಸ್ತಲಿನ್ ಕಾರ್ಯಕ್ರಮ ಉದ್ಘಾಟಿಸಿದರು.
ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಶ್ರೀಶಾ ಭಟ್, ಕೋಡ್ ಕ್ರಾಫ್ಟ್ ಟೆಕ್ನಾಲಜಿಸ್ ಅಪರೇಷನ್ ಲೀಡ್ ಜೋಬಿನ್ ಜೋಸೆಫ್ ಪಿ.ಜೆ, ನಿವೃತ್ತ ಮುಖ್ಯ ಶಿಕ್ಷಕ ಶಂಕರ್ ನಾರಾಯಣ್ ರಾವ್, ಮುಖ್ಯ ಶಿಕ್ಷಕ ದಿನಕರ ಕುಂಭಾಶಿ, ವಿಜ್ಞಾನ ಶಿಕ್ಷಕ ಸಂಪತ್ ರಾಜ್, ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನ ಸ್ವಯಂಸೇವಕರಾದ ಹೇಮಂತ್, ಪ್ರಜ್ವಲ್, ಜಿತೇಶ್ ಉಪಸ್ಥಿತರಿದ್ದರು. ವೀಕ್ಷಾ ಮತ್ತು ಪೂರ್ಣ ತೀರ್ಪುಗಾರರಾಗಿದ್ದರು.
ಶಿಕ್ಷಕ ದಿನಕರ ಕುಂಭಾಶಿ ಪ್ರಸ್ತಾವನೆಗೈದರು. ಸದಾಶಿವ ಉಪಾಧ್ಯಾಯ ವಂದಿಸಿದರು. ಸುಧಾಕರ ಪೋಸ್ರಾಲ್ ನಿರೂಪಿಸಿದರು.
ವಿಜ್ಞಾನ ಮೇಳದಲ್ಲಿ ಭವಿಷ್ ಮತ್ತು ಮಣಿ ಪ್ರಸಾದ್-ಪ್ರಥಮ, ಸಮೀಕ್ಷಾ ಮತ್ತು ಶರಣ್ಯ-ದ್ವಿತೀಯ, ದರ್ಶಿತ್ ಮತ್ತು ಪ್ರಯಾಗ್-ತೃತೀಯ ಹಾಗೂ ಓಂಕಾರ್ ಮತ್ತು ಅರ್ಪಿತ್, ಮಣಿಕಂಠಯ್ಯ ಮತ್ತು ಮಂಜುನಾಥ ದಡ್ಡಿ ಸಮಾಧಾನಕರ ಬಹುಮಾನವನ್ನು ಪಡೆದರು. 5 ತಂಡಗಳು ಜಿಲ್ಲಾಮಟ್ಟದ ವಿಜ್ಞಾನ ಮೇಳ ಸ್ಪರ್ಧೆಗೆ ಆಯ್ಕೆಯಾಗಿದೆ. ಶಾಲೆಯ 35 ವಿದ್ಯಾರ್ಥಿಗಳು ಭಾಗವಹಿಸಿದರು.