
ಕಡಂದಲೆ ಶಾಲೆಗೆ ಲಯನ್ಸ್ ಅಲಂಗಾರ್ ಬ್ಯಾಂಡ್‌ಸೆಟ್ ಕೊಡುಗೆ
ಲಯನ್ಸ್ ಕ್ಲಬ್ ಅಧ್ಯಕ್ಷ ಅಮಿತ್ ಡಿಸಿಲ್ವ ಅವರು ಬ್ಯಾಂಡ್ ಸೆಟ್ ಅನ್ನು ಮುಖ್ಯ ಶಿಕ್ಷಕಿ ಪ್ರತಿಭಾ ಅವರಿಗೆ ಹಸ್ತಾಂತರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಶಿಕ್ಷಕಿ ಪ್ರತಿಭಾ, ಬ್ಯಾಂಡ್‌ಸೆಟ್ ಬೇಕೆಂದು ಲಯನ್ಸ್ ಕ್ಲಬ್‌ಗೆ ಬೇಡಿಕೆ ಇಟ್ಟಾಗ 24 ಗಂಟೆಯೊಳಗಡೆ ನಮಗೆ ಅದನ್ನು ಒದಗಿಸಿದ್ದಾರೆ. ಮಾತ್ರವಲ್ಲ ಲಯನ್ಸ್ ಅಧ್ಯಕ್ಷರ ಮಗ ಉಚಿತವಾಗಿ ಮಕ್ಕಳಿಗೆ ಬ್ಯಾಂಡ್ ತರಬೇತಿ ನೀಡಿದ್ದಾರೆ. ಮುಂದೆಯೂ ಹೆಚ್ಚಿನ ಸರ್ಕಾರಿ ಶಾಲೆಗಳಿಗೆ ಕೊಡುಗೆ ನೀಡುವಂತಾಗಲಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಮಿತ್ ಡಿಸಿಲ್ವ, ಲಯನ್ಸ್ ಸದಸ್ಯರು ಹಾಗೂ ದಾನಿಗಳ ನೆರವಿನೊಂದಿಗೆ ನಿರಂತರವಾಗಿ ಸಮಾಜ ಸೇವೆಯನ್ನು ಮಾಡುತ್ತಾ ಬರುತ್ತಿದ್ದೇವೆ. ದಾನಿ ಸುನೀಲ್ ಪಿಂಟೊ ಅವರು ಲಯನ್ಸ್ ಮುಖಾಂತರ ದಾನವಾಗಿ ನೀಡಿದ ಬ್ಯಾಂಡ್‌ಸೆಟ್ ಅನ್ನು ಶಾಲೆಗೆ ಒದಗಿಸುತ್ತೇವೆ. ಮುಂದೆಯೂ ಶಾಲೆಗೆ ಕೊಡುಗೆಯನ್ನು ನೀಡುತ್ತೇವೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಸೀತಾರಾಮ ಸಾಲ್ಯಾನ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್ ಪೂಜಾರಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ರಿಚರ್ಡ್ ಡಿಸೋಜ, ಕೋಶಾಧಿಕಾರಿ ರೊಕಿ ಮಸ್ಕರೇನ್ಹಸ್, ಸದಸ್ಯರಾದ ರಿಚರ್ಡ್ ಬರ್ಬೊಜ, ಜೋನ್ ದಾಂತಿಸ್, ಮೈಕಲ್ ಸಿಕ್ವೇರ, ಹರ್ಮನ್ ಡಿಸಿಲ್ವ, ವಿದ್ಯಾ ಮಸ್ಕರೇನ್ಹಸ್, ಮೆಲಿಟ ಬರ್ಬೊಜ, ಲವಿಟಾ ಬರ್ಬೊಜ, ಶಿಕ್ಷಕರಾದ ಸತೀಶ್ ಶೆಟ್ಟಿ, ಪೌಲಿನ್ ಪಿಂಟೊ, ಸುಮನಾ ಎಚ್.ಎಚ್, ರಾಜೇಶ್ವರಿ, ಅಂಗನವಾಡಿ ಕಾರ್ಯಕರ್ತೆ ಬೆನೆಡಿಕ್ಟ್ ದಾಂತಿಸ್ ಉಪಸ್ಥಿತರಿದ್ದರು.