
ಸ್ವಸ್ತಿಶ್ರೀ ಚಾರುಕೀರ್ತಿ ಯಕ್ಷ ಕಲಾ ಬಳಗದಿಂದ ಸರಣಿ ತಾಳಮದ್ದಳೆ
Thursday, August 14, 2025
ಮೂಡುಬಿದಿರೆ: ಯಕ್ಷಗಾನ ಮಾನವ ಜೀವನದಲ್ಲಿ ಸದಾಚಾರಿಯಾಗಲು ಸತ್ಯ,ನಿಷ್ಠೆಯಿಂದ ಬೆಳೆಯಲು ಸಹಕಾರಿಯಾಬಲ್ಲದು. ಪೌರಣಿಕ ಕಥನಗಳನ್ನು ಅರಿತು, ಪಾಪ ಪುಣ್ಯದ ಬಗ್ಗೆ ತಿಳಿಸುವಲ್ಲಿಯೂ ಯಕ್ಷಗಾನ ನೆರವಾಗುತ್ತದೆ ಎಂದು ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾಯ೯ವಯ೯ ಸ್ವಾಮೀಜಿ ನುಡಿದರು.
ಅವರು ಸ್ವಸ್ತಿಶ್ರೀ ಚಾರುಕೀತಿ೯ ಯಕ್ಷ ಕಲಾ ಬಳಗದ 2025ರ ಸರಣಿ ಯಕ್ಷಗಾನ ತಾಳ ಮದ್ದಳೆ ಕಾರ್ಯಕ್ರಮವನ್ನು ಮೂಡುಬಿದಿರೆ ಜೈನಮಠದ ಭಟ್ಟಾರಕ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ವಕೀಲರಾದ ಎಂ.ಬಾಹುಬಲಿ ಪ್ರಸಾದ್, ಕೆ.ಆರ್ ಪಂಡಿತ್, ಬಸದಿ ಮೊಕ್ತೇಸರ ಪಟ್ಣಶೆಟ್ಟಿ ಸುಧೇಶ್ ಕುಮಾರ್, ಪ್ರಮುಖರಾದ ಪ್ರವೀಣ್ ಇಂದ್ರ, ಸೋಮಶೇಖರ್ ಉಜಿರೆ, ಪ್ರವೀಣ್ ಚಂದ್ರ, ವೀರೇಂದ್ರ ಇಂದ್ರ, ಮುನಿರಾಜ್ ರೆಂಜಾಳ, ಜಬ್ಬಾರ್ ಸಮೋ ಪಶುಪತಿ ಶಾಸ್ತಿç, ಗಣೇಶ್ ಕನ್ನಡಿಕಟ್ಟೆ, ದೇವಾನಂದ ಭಟ್, ರವಿರಾಜ್ ಜೈನ್, ಪ್ರಕಾಶ್ ಗಟ್ಟಿ, ಸೂರ್ಯನಾರಾಯಣ ಭಟ್, ಬಾಲ ಕೃಷ್ಣ ಭಟ್ ಪುತ್ತಿಗೆ, ಪ್ರಸಾದ್ ಉಪಸ್ಥಿತರಿದ್ದರು.
ಡಾ.ಪ್ರಭಾತ್ ಬಲ್ನಾಡ್ ನಿರೂಪಿಸಿದರು. ಮಠದ ವ್ಯವಸ್ಥಾಪಕ ಸಂಜಯಂತ ಕುಮಾರ್ ಸ್ವಾಗತಿಸಿದರು.
ಶ್ರೀ ನೇಮಿ ಜಿನ ಚರಿತ್ರೆ ಹಾಗೂ ಶಲ್ಯ ಸಾರಥ್ಯ ತಾಳಮದ್ದಳೆ ನಡೆಯಿತು.