
ಕಡಂದಲೆ ಶ್ರೀ ಸುಬ್ರಮಣ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ
Thursday, August 14, 2025
ಮೂಡುಬಿದಿರೆ: ಕಡಂದಲೆ ಶ್ರೀ ಸುಬ್ರಮಣ್ಯ ಸ್ವಾಮಿ ಅನುದಾನಿತ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.
ಮುಖ್ಯ ಶಿಕ್ಷಕ ದಿನಕರ್ ಕುಂಭಾಶಿ ಅಧ್ಯಕ್ಷತೆ ವಹಿಸಿ, ಮಕ್ಕಳು ಯಾವುದೇ ವ್ಯಸನಗಳಿಗೆ ಆಕರ್ಷಣೆ ಆಗದೇ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರ ಇರಬೇಕು ಎಂದರು.
ಮೂಡುಬಿದಿರೆ ವಕೀಲೆ ಸುಚಿತಾ, ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು.
ಸಂಪಿಗೆ ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷ ಟಿ.ಎನ್ ಕೆಂಬಾರೆ, ಸಂಪಿಗೆ ವಲಯದ ಮೇಲ್ವಿಚಾರಕ ಶ್ರೀನಿವಾಸ್ ಡಿ. ಉಪಸ್ಥಿತರಿದ್ದರು. ಸದಾಶಿವ ಉಪಾಧ್ಯಾಯ ವಂದಿಸಿದರು.