
ಮೂಡುಬಿದಿರೆ ವಿಶ್ವಕರ್ಮ ಸಭಾ ಭವನಕ್ಕೆ ಅನುದಾನ: ಸಚಿವ ತಂಗಡಗಿ ಅವರಿಗೆ ಮನವಿ
Tuesday, August 5, 2025
ಮೂಡುಬಿದಿರೆ: ಇಲ್ಲಿನ ಶ್ರೀಗುರುಮಠ ಕಾಳಿಕಾಂಬಾ ದೇವಸ್ಥಾನದ ಶ್ರೀ ವಿಶ್ವಕರ್ಮ ಸಭಾ ಭವನಕ್ಕೆ ವಿಶೇಷ ಅನುದಾನ ನೀಡುವಂತೆ ಆಗ್ರಹಿಸಿ ಸಭಾಭವನ ನಿರ್ಮಾಣ ಸಮಿತಿಯವರು ರಾಜ್ಯ ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ಶಿವರಾಜ್ ಎಸ್. ತಂಗಡಗಿ ಅವರಿಗೆ ಬೆಂಗಳೂರಿನ ಅವರ ನಿವಾಸದ ಕಚೇರಿಯಲ್ಲಿ ಮನವಿ ಪತ್ರವನ್ನು ಸಲ್ಲಿಸಿದರು.
ಕೆಪಿಸಿಸಿ ಪ್ರ.ಕಾರ್ಯದರ್ಶಿ ಮಿಥುನ್ ರೈ, ಸಭಾ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಪುರೋಹಿತ ಎನ್.ಜಯಕರ ಆಚಾರ್ಯ, ಜತೆಕಾರ್ಯದರ್ಶಿ, ಮೊಕ್ತೇಸರ ಶಿವರಾಮ ಆಚಾರ್ಯ ಉಳಿಯ, ದೇವಳದ ಆಡಳಿತ ಮೊಕ್ತೇಸರ ಎಂ.ಕೆ.ಬಾಲಕೃಷ್ಣ ಆಚಾರ್ಯ, ಸದಸ್ಯರಾದ ಸುರೇಂದ್ರ ಆಚಾರ್ಯ ಸಾಣೂರು ಮತ್ತು ಪುತ್ತಿಗೆಮನೆ ರಾಜೇಶ್ ಆಚಾರ್ ಉಪಸ್ಥಿತರಿದ್ದರು. ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ಇತ್ತರು.