ಜಮೀಯತುಲ್ ಫಲಾಹ್: ಮೂಡುಬಿದಿರೆ ತಾಲೂಕು ಅಧ್ಯಕ್ಷರಾಗಿ ಶೇಖ್ ನೂರುದ್ದೀನ್, ಕಾರ್ಯದರ್ಶಿಯಾಗಿ ಅಶ್ರಫ್ ಮರೋಡಿ
Friday, August 8, 2025
ಮೂಡುಬಿದಿರೆ: ಮೂಡುಬಿದಿರೆ ತಾಲೂಕು ಜಮೀಯತುಲ್ ಫಲಾಹ್ ನ ನೂತನ ಅಧ್ಯಕ್ಷರಾಗಿ ಶೇಖ್ ನೂರುದ್ದೀನ್ ಹಾಗೂ ಕಾರ್ಯದರ್ಶಿಯಾಗಿ ಅಶ್ರಫ್ ಮರೋಡಿ ಅವರು ಆಯ್ಕೆಯಾಗಿದ್ದಾರೆ.
ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಇತರ ಪದಾಧಿಕಾರಿಗಳು:
ಶೇಖ್ ಅಬ್ದುಲ್ ಗಫೂರ್ (ಖಜಾಂಚಿ), ಮುಹಮ್ಮದ್ ಆರಿಫ್,ಅಬ್ದುಲ್ ಅಝೀಝ್ ಮಲಿಕ್ (ಉಪಾಧ್ಯಕ್ಷರು), ಮುಹಮ್ಮದ್ ಶಾಕಿರ್ (ಜತೆ ಕಾರ್ಯದರ್ಶಿ), ರಿಝ್ವಾನ್ ಅಹ್ಮದ್ (ಆಯೋಜನಾ ಕಾರ್ಯದರ್ಶಿ), ಅಬುಲ್ ಅಲಾ ಪುತ್ತಿಗೆ (ಪತ್ರಿಕಾ ಕಾರ್ಯದರ್ಶಿ).
ಖಜಾಂಚಿ ಸಲೀಮ್ ಹಂಡೇಲ್ ಅವರ ಕಿರಾಅತ್ ಮೂಲಕ ಆರಂಭಗೊಂಡ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರಾದ ಅಬ್ದುಲ್ ರವೂಫ್ ಅವರು ಸ್ವಾಗತಿಸಿದರು. ಕಾರ್ಯದರ್ಶಿ ಶೇಖ್ ಅಬ್ದುಲ್ ಗಫೂರ್ ಅವರು ವಾರ್ಷಿಕ ವರದಿ ಮಂಡಿಸಿದರು.
ಚುನಾವಣಾ ಅಧಿಕಾರಿಗಳಾದ ಇಕ್ಬಾಲ್ ಬಂಟ್ವಾಳ ಹಾಗೂ ಅಶ್ಫಾಕ್ ಕಾರ್ಕಳ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
21 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.