ದೇಶದ ಘನತೆ, ಗೌರವ ಕಾಪಾಡಲು ಕಟಿಬದ್ಧರಾಗಬೇಕು: ತಹಶೀಲ್ದಾರ್ ಮುಂದಲಮನಿ
Friday, August 15, 2025
ಮೂಡುಬಿದಿರೆ: ಬದುಕಿನಲ್ಲಿ ಅನಿರೀಕ್ಷಿತಗಳು ಸಂಭವಿಸಿದಾಗ ಅದನ್ನು ಎದುರಿಸಿ ಈ ದೇಶದ ಘನತೆ ಗೌರವ ಕಾಪಾಡುವಲ್ಲಿ ನಾವು ಕಟಿಬದ್ಧರಾಗಬೇಕು ಎಂದು ಮೂಡುಬಿದಿರೆ ತಾಲೂಕು ತಹಶೀಲ್ದಾರ್ ಶ್ರೀಧರ್ ಎಸ್ ಮುಂದಲಮನಿ ಹೇಳಿದರು.
ಅವರು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ 79ನೇ ವಷ೯ದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಗೈದು ನಂತರ ಎಕ್ಸಲೆಂಟ್ ಸಂಸ್ಥೆಯ ನೂತನ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಪ್ರತಿಕೂಲತೆಗಳ ನಡುವೆ ದೃಢ ಚಿತ್ತದಿಂದ ಬದುಕಿ ಗೆದ್ದು ನಾಡಿಗೆ, ದೇಶಕ್ಕೆ ಕೀರ್ತಿ ತರಬೇಕು ಎಂದರು.
ಸಂಸ್ಥೆಯ ಗೌರವಾಧ್ಯಕ್ಷ ಅಭಯಚಂದ್ರ ಜೈನ್ ದೇಶ ಭಾಷೆಗಳ ರಕ್ಷಣೆ ನಮ್ಮ ಕರ್ತವ್ಯ ಎಂದರು.
ಎನ್‌ಸಿಸಿ ವಿದ್ಯಾರ್ಥಿಗಳು ಕವಾಯತಿನೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.
ಎಕ್ಸಲೆಂಟ್ ನ ಕಾರ್ಯದರ್ಶಿ ರಶ್ಮಿತಾ ಜೈನ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು.
ಸಂಸ್ಥೆಯ ಉಪನ್ಯಾಸಕಿ ಕು.ಪ್ರಿಯಾಂಕ ಸ್ವಾಗತಿಸಿ, ಡಾ. ಶೃತಿ ಅತಿಥಿಗಳನ್ನು ಪರಿಚಯಿಸಿದರು. ಕು. ಪ್ರಮೀಳಾ ಪಿಂಟೋ ವಂದಿಸಿದರು. ಸಹ ಮುಖ್ಯ ಶಿಕ್ಷಕ ಜಯಶೀಲ ಕಾರ್ಯಕ್ರಮ ನಿರೂಪಿಸಿದರು.

