ಸಮಾನ ಅವಕಾಶ ಮತ್ತು ಸಹಬಾಳ್ವೆ ಸ್ವಾತಂತ್ರ್ಯ ದಿನನ ಆಶಯ: ಡಾ. ಮಾವಿನಕುಳಿ

ಸಮಾನ ಅವಕಾಶ ಮತ್ತು ಸಹಬಾಳ್ವೆ ಸ್ವಾತಂತ್ರ್ಯ ದಿನನ ಆಶಯ: ಡಾ. ಮಾವಿನಕುಳಿ


ಮೂಡುಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜಿನಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಜಯಪ್ರಕಾಶ ಮಾವಿನಕುಳಿಮ ಅವರು 79ನೇ ವಷ೯ದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಗೈದರು.

ನಂತರ ಮಾತನಾಡಿದ ಅವರು ದೇಶಕ್ಕಾಗಿ ಹೋರಾಟ ಮಾಡಿ ಮಡಿದ ಮಹನೀಯರನ್ನು ಸ್ಮರಿಸುವುದು ಮತ್ತು ಸಂವಿಧಾನದ ಆಶಯಗಳನ್ನು ಸಂರಕ್ಷಿಸಿ ಎಲ್ಲರಿಗೂ ಸಮಾನ ಅವಕಾಶ ಮತ್ತು ಸಹಬಾಳ್ವೆ ದೊರಕುವಂತೆ ಮಾಡುವುದು ಸ್ವಾತಂತ್ರ್ಯ ದಿನದ ಆಶಯವಾಗಿರುತ್ತದೆ ಎಂದು ಹೇಳಿ  ಶುಭ ಹಾರೈಸಿದರು. 

 ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರ ಜೈನ್, ವಿಶ್ವಸ್ಥ ಮಂಡಳಿಯ ಕೋಶಾಧಿಕಾರಿ ರಾಮಪ್ರಸಾದ್ ಭಟ್, ಸದಸ್ಯರಾದ ಸಿ.ಎಚ್. ಅಬ್ದುಲ್ ಗಫೂರ್, ಕೆ. ವೆಂಕಟೇಶ್ ಕಾಮತ್, ಜೆ.ಜೆ.ಪಿಂಟೋ, ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿ ಹಾಗೂ ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ, ಎಸ್.ಎನ್.ಎಂ. ಪೊಲಿಟೆಕ್ನಿಕ್ ಪ್ರಾಂಶುಪಾಲೆ ನರೋನ್ಹಾ  ತರೀನಾ ರೀಟಾ, ಎಜಿ ಸೋನ್ಸ್ ಐಟಿಐ ಪ್ರಾಂಶುಪಾಲ ಶ್ರೀಕಾಂತ ಹೊಳ್ಳ, ಎಂ.ಕೆ. ಅನಂತ್ರಾಜ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಧನಂಜಯ ಶೆಟ್ಟಿ, ಹಾಗೂ ಎಲ್ಲಾ ಸಂಸ್ಥೆಗಳ  ಅಧ್ಯಾಪಕರು ಅಧ್ಯಾಪಕೇತರರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.   ಮಹಾವೀರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಹಾಗೂ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ವಿಜಯಲಕ್ಷೀ ಸ್ವಾಗತಿಸಿ, ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article