ಬಿಜೆಪಿ ಮಂಡಲದಿಂದ ಮುಲ್ಕಿಯಲ್ಲಿ ತಿರಂಗ ಯಾತ್ರೆ
Friday, August 15, 2025
ಮೂಡುಬಿದಿರೆ: 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲ ವತಿಯಿಂದ ತಿರಂಗ ಯಾತ್ರೆ ನಡೆಯಿತು.
ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ಅವರ ಅಧ್ಯಕ್ಷತೆಯಲ್ಲಿ ನಡೆದ ತಿರಂಗ ಯಾತ್ರೆಗೆ ಕ್ಷೇತ್ರದ ಶಾಸಕ ಉಮನಾಥ ಎ.ಕೋಟ್ಯಾನ್ ಅವರು ಮುಲ್ಕಿ ಕೆ.ಎಸ್. ರಾವ್ ನಗರದ ಕೊರ್ದಬ್ಬು ದೈವಸ್ಥಾನದ ಬಳಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಈಶ್ವರ್ ಕಟೀಲ್, ಕಸ್ತೂರಿ ಪಂಜ, ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು, ತಿರಂಗ ಯಾತ್ರೆ ಸಂಚಾಲಕ ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ಅಭಿಲಾಷ್ ಶೆಟ್ಟಿ ಕಟೀಲ್, ಯುವಮೋರ್ಚಾ ಅಧ್ಯಕ್ಷ ಕುಮಾರ್ ಪ್ರಸಾದ್, ಮಂಡಲ ಪದಾಧಿಕಾರಿಗಳು, ರೈತ ಮೋರ್ಚಾ ಅಧ್ಯಕ್ಷ ರಾಜೇಶ್ ಅಮೀನ್, ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ಲಕ್ಷ್ಮೀ ಶೇಣವ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶೈಲೇಶ್ ಮೂಲ್ಕಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ, ವಿಠಲ್ ಎನ್.ಎಂ., ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್ ಕಾರ್ಯದರ್ಶಿ ಪ್ರಶಾಂತ್ ಮೂಲ್ಕಿ ಪಕ್ಷದ ಕಾರ್ಯಕರ್ತರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ವಿನೋದ್ ಬೆಳ್ಳಾಯರೆ ಕಾರ್ಯಕ್ರಮ ನಿರೂಪಿಸಿದರು.


