ದೊಡ್ಮನೆ ಫ್ರೆಂಡ್ಸ್ ಬೆದ್ರ ಇದರ ಲೋಗೋ ಬಿಡುಗಡೆ

ದೊಡ್ಮನೆ ಫ್ರೆಂಡ್ಸ್ ಬೆದ್ರ ಇದರ ಲೋಗೋ ಬಿಡುಗಡೆ


ಮೂಡುಬಿದಿರೆ: ದೊಡ್ಮನೆ ಫ್ರೆಂಡ್ಸ್  ಬೆದ್ರ (ರಿ) ಇದರ ನೂತನ ಲೋಗೋ ಬಿಡುಗಡೆ ಕಾಯ೯ಕ್ರಮವು ಶ್ರೀ ಗೌರಿ ದೇವಸ್ಥಾನದಲ್ಲಿ ಗುರುವಾರ ನಡೆಯಿತು.


ಮೂಡುಬಿದಿರೆ  ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ. ಅವರು ಲೋಗೋವನ್ನು ಅನಾವರಣಗೊಳಿಸಿದರು.


ಶ್ರೀ ಗೌರಿ ದೇವಸ್ಥಾನದ ಅನುವಂಶಿಕ  ಅರ್ಚಕ ರಾಜೇಶ್ ಭಟ್, ಬೆದ್ರ ಫ್ರೆಂಡ್ಸ್ ಹಾಗೂ ಮೂಡುಬಿದಿರೆ  ಹೀಲಿಂಗ್  ಹ್ಯಾಂಡ್ ಚಾರಿಟೇಬಲ್ ಟ್ರಸ್ಟ್ (ರಿ.)ನ  ಪ್ರಜ್ವಲ್ ಕುಲಾಲ್, ಸರ್ವೋದಯ ಫ್ರೆಂಡ್ಸ್ ನ ಪ್ರಕಾಶ್ ಕುಂದರ್, ಪವರ್ ಫ್ರೆಂಡ್ಸ್ ನ ಸುಧಾಕರ್ ಶೆಟ್ಟಿ, ದೊಡ್ಮನೆ ಫ್ರೆಂಡ್ಸ್ ನ ಹಿರಿಯರಾದ ಓಮಯ್ಯ ಪೂಜಾರಿ  ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


9 ವರ್ಷಗಳಿಂದ ದೊಡ್ಮನೆ ಫ್ರೆಂಡ್ಸ್ ತಂಡವು ಸ್ವಚ್ಛತಾ ಕಾರ್ಯಕ್ರಮ, ಚಂದ್ರಶೇಖರ ದೇವರ ಹಾಗೂ ಶ್ರೀ ಗೌರಿ ದೇವರ  ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಾಡಿರುವ ಸೇವೆಗಳ ಬಗ್ಗೆ, ಚಂದ್ರಶೇಖರ ದೇವರ ಪುಷ್ಕರಣಿಯು ನೂರಾರು ವರ್ಷಗಳಿಂದ ಪಾಳು ಬಿದ್ದ ಪರಿಸ್ಥಿತಿಯಲ್ಲಿತ್ತು. ಇದರ ಮರು ನಿರ್ಮಾಣದ ಕಾರ್ಯದಲ್ಲಿ ತಂಡದ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮೂಡುಬಿದಿರೆ  ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾ ಯಾತ್ರೆಯ ಸಂದರ್ಭದಲ್ಲಿ ಕಳೆದ 7 ವರ್ಷಗಳಿಂದ  ತಮ್ಮ ತಂಡದ ವೈವಿಧ್ಯಮಯ ಕಲಾಕಾಣಿಕೆಯನ್ನು  ಶಿಸ್ತುಬದ್ಧವಾಗಿ  ಸೇವೆ  ಸಲ್ಲಿಸುತ್ತಿದ್ದಾರೆಂದು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸುದರ್ಶನ್ ಮೂಡುಬಿದಿರೆ ಶುಭ ಹಾರೈಸಿದರು.

ರಾಜೇಶ್ ಭಟ್ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article