ದ.ಕ. ಚೆಸ್ ಅಸೋಸಿಯೇಶನ್ ಅಧ್ಯಕ್ಷೆಯಾಗಿ ಡಾ. ಅಮರಶ್ರೀ ಅಮರನಾಥ ಶೆಟ್ಟಿ ಆಯ್ಕೆ
Friday, August 22, 2025
ಮೂಡುಬಿದಿರೆ: ದ.ಕ. ಜಿಲ್ಲಾ ಚೆಸ್ ಅಸೋಸಿಯೇಶನ್ ನ ಅಧ್ಯಕ್ಷೆಯಾಗಿ ಡಾ.ಅಮರಶ್ರೀ ಅಮರನಾಥ ಶೆಟ್ಟಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷರಾಗಿ ಡಾ.ವಾಣಿ ಎಸ್.ಪಣಿಕರ್ ಮತ್ತು ವಕೀಲ ನಾರಾಯಣ್ ಎಲ್., ಕಾರ್ಯದರ್ಶಿ ರಮ್ಯಾ ಎಸ್. ರೈ, ಜೊತೆ ಕಾರ್ಯದರ್ಶಿ ನಿಶಾ ಪಣಿಕ್ಕರ್, ಕೋಶಾಧಿಕಾರಿ ಕ್ರತಿನ್ ಕುಮಾರ್, ಶುಭಮಂಗಳ ಕೋಟೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.