ಧರ್ಮಸ್ಥಳ ಪ್ರಕರಣ: ‘ಎಸ್‌ಐಟಿ’ ಭಕ್ತಾಧಿಗಳ ಗೊಂದಲಕ್ಕೆ ತೆರೆ
Thursday, August 14, 2025
ಪುತ್ತೂರು: ಧರ್ಮಸ್ಥಳ ಪ್ರಕರಣದ ವಿಚಾರವನ್ನು ಎಸ್‌ಐಟಿ ತನಿಖೆಗೆ ನೀಡುವ ಮೂಲಕ ರಾಜ್ಯ ಸರ್ಕಾರ ಧರ್ಮಸ್ಥಳ ಕ್ಷೇತ್ರದ ಭಕ್ತಾಧಿಗಳ ಮನಸ್ಸಿನಲ್ಲಿರುವ ಗೊಂದಲಕ್ಕೆ ತೆರೆ ಎಳೆಯುವ ಕೆಲಸ ಮಾಡಿದೆ. ರಾಜ್ಯದ ಕಾಂಗ್ರೇಸ್ ಸರ್ಕಾರವೂ ಧರ್ಮಸ್ಥಳ ಕ್ಷೇತ್ರದ ವಿರೋಧಿ ಅಲ್ಲ. ಕಾಂಗ್ರೆಸ್ ಪಕ್ಷವೂ ಧರ್ಮಸ್ಥಳದ ಹಾಗೂ ಹಿಂದೂಧರ್ಮದ ಪರವಾಗಿಯೇ ಇದೆ. ಆದರೆ ಈ ವಿಚಾರದಲ್ಲಿ ರಾಜಕೀಯ ಮಾಡುವುದು ಒಳ್ಳೆಯದಲ್ಲ. ಇದನ್ನು ರಾಜಕೀಯವಾಗಿ ಬಳಿಸಿಕೊಳ್ಳಬಾರದು ಎಂಬುವುದು ನನ್ನ ಕಳಕಳಿ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದ್ದಾರೆ.
ಗುರುವಾರ ವಿಧಾನಸಭಾ ಅಧವೇಶನದಲ್ಲಿ ಮಾತನಾಡಿದ ಅವರು ಕಳೆದ 10-12 ವರ್ಷಗಳಿಂದ ಸೌಜನ್ಯ ಅತ್ಯಾಚಾರಕ್ಕೆ ಸಂಬಂಧಿಸಿ ಪ್ರತಿಭಟನೆಗಳು ಆರೋಪಗಳು ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿತ್ತು. ಈಗ ಕಳೆದ 18 ದಿನಗಳಿಂದ ಎಸ್‌ಐಟಿ ಈ ಬಗ್ಗೆ ತನಿಖೆ ನಡೆಸುತ್ತಿದೆ.
ಧರ್ಮಸ್ಥಳ ಕ್ಷೇತ್ರದ ಆಡಳಿತದವರು, ಪರ-ವಿರೋಧ ಚಿಂತನೆಯವರೂ ಸೇರಿದಂತೆ ಎಲ್ಲರೂ ರಾಜ್ಯ ಸರ್ಕಾರದ ಒಳ್ಳೆಯ ನಿರ್ಧಾರಕ್ಕೆ ಎಲ್ಲರೂ ಸ್ವಾಗತ ಮಾಡಿದ್ದಾರೆ.
ಧರ್ಮಸ್ಥಳ ಕ್ಷೇತ್ರಕ್ಕೆ ರಾಜ್ಯದಲ್ಲಿ ಮಾತ್ರವಲ್ಲ ವಿಶ್ವದಲ್ಲಿಯೇ ಭಕ್ತಾಧಿಗಳಿದ್ದಾರೆ. ಧರ್ಮಸ್ಥಳ ಕ್ಷೇತ್ರ ಕೇವಲ ಧಾರ್ಮಿಕ ತಾಣ ಮಾತ್ರವಲ್ಲ. ಅದೊಂದು ಜಿಲ್ಲೆಯ ಟೆಂಪಲ್ ಟೂರಿಸಂಗೆ ಸಾಕ್ಷಿಯಾಗಿದೆ. ರಾಜ್ಯ ಸರ್ಕಾರ ಯಾವುದೇ ಧರ್ಮದ ವಿರೋಧಿಯಲ್ಲ ಎಂದವರು ಹೇಳಿದರು.