ಕುಡಿದು ಇಲ್ಲೆ ಬಿದ್ದುಕೊಳ್ಳುತ್ತಾರೆ
Thursday, August 21, 2025
ಸುಬ್ರಹ್ಮಣ್ಯ: ಗುತ್ತಿಗಾರು ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣದಲ್ಲಿ ಕುಡುಕರ ಹಾವಳಿ ಬಹುವಾಗಿ ಸಮಸ್ಯೆಯಾಗಿ ಕಾಡಿದೆ.
ಇದಕ್ಕೆ ಯಾರನ್ನು ದೂರಬೇಕು ಎನ್ನುವ ಪರಿಸ್ಥಿತಿಯಿಲ್ಲ. ಆದರೆ ಈ ಕುಡುಕರಿಂದ ಹಲವು ಸಮಸ್ಯೆ. ಆ.20 ರಂದು ಮೂರು ಜನ ಕುಡುಕರು ದಿನಪೂರ್ತಿ ಬಸ್ ತಂಗುದಾಣ ಮಲಗಿ ದಿನ ಕಳೆದಿದ್ದಾರೆ. ಒಬ್ಬರಂದು ಬಸ್ ತಂಗುದಾಣದಲ್ಲೇ ಮಲ, ಮೂತ್ರ ಮಾಡಿಕೊಂಡಿದ್ದಾರೆ. ಇದು ಇಂದು ನಿನ್ನೆಯ ವಿಷಯವಲ್ಲ. ಒಬ್ಬರಂತು ಕಳೆದ ಎರಡ್ಮೂರು ತಿಂಗಳಿನಿಂದ ಬಸ್ ತಂಗುದಾಣದಲ್ಲೇ ವಾಸವಾಗಿದ್ದಾರೆ. ಎಲ್ಲಿ ಹೋದರು ಮತ್ತೆ ಬಂದು ಬಸ್ ತಂಗುದಾಣಕ್ಕೆ ಬಂದು ಬಿದ್ದುಕೊಳ್ಳುತ್ತಾರೆ. ನೂರಾರು ಮಕ್ಕಳು, ಮಹಿಳೆಯರು, ಸಾರ್ವಜನಿಕರು ಬರುವ ಈ ನಿಲ್ದಾಣದಲ್ಲಿ ಕುಡುಕರ ಉಪಟಳ ಹೆಚ್ಚಾಗಿ ಸಾರ್ವಜನಿಕರು ತಂಗುದಾಣ ಇದ್ದರೂ ರಸ್ತೆ ಬದಿ ಅಥವಾ ಅಂಗಡಿ ಮುಂದೆ ನಿಲ್ಲುವ ಪರಿಸ್ಥಿತಿ ಬಂದಿದೆ.