ಅನ್ಯಮತೀಯ ಮಹಿಳೆಯಿಂದ ದಸರಾ ಉದ್ಘಾಟನೆಗೆ ವಿರೋಧ
Sunday, August 24, 2025
ಉಡುಪಿ: ಕರ್ನಾಟಕದ ನಾಡದೇವತೆ ಚಾಮುಂಡೇಶ್ವರಿ ಮಾತೆಯ ದಸರಾ ಮಹೋತ್ಸವವನ್ನು ಹಿಂದೂ ಧಾರ್ಮಿಕ ನಂಬಿಕೆಗಳನ್ನು ಒಪ್ಪದ ಓರ್ವ ಅನ್ಯ ಮತೀಯ ಮಹಿಳೆಯ ಮೂಲಕ ಉದ್ಘಾಟನೆ ನಡೆಸಲು ಮುಂದಾದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹಿಂದೂಗಳ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸಿ ಷಡ್ಯಂತ್ರ ರೂಪಿಸಿದ ಹಿಂದೂ ವಿರೋಧಿ ಶಕ್ತಿಗಳಿಗೆ ಮಣಿದು ರಾಜ್ಯ ಸರಕಾರ ಈ ನಿರ್ಧಾರ ಮಾಡಿದಂತಿದೆ.
ಮೈಸೂರು ಒಡೆಯರ ಸಂಸ್ಥಾನದ ಆಳ್ವಿಕೆಯ ಕಾಲದಿಂದ ನಡೆಯುತ್ತಿರುವ ಮೈಸೂರು ದಸರಾ ಮಹೋತ್ಸವ ವಿಚಾರದಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ನಿರ್ಧಾರವನ್ನು ರಾಜ್ಯ ಸರಕಾರ ಪುನರ್ ಪರಿಶೀಲನೆ ಮಾಡಿ ದೇವಸ್ಥಾನದ ಪಾವಿತ್ರ್ಯತೆಗೆ ಪೂರಕವಾಗಿ ಯೋಗ್ಯ ವ್ಯಕ್ತಿಯಿಂದ ದಸರಾ ಉದ್ಘಾಟನೆ ಮಾಡಲಿ ಎಂದು ಯಶಪಾಲ್ ಸುವರ್ಣ ಆಗ್ರಹಿಸಿದ್ದಾರೆ.