ಜನಪ್ರತಿನಿಧಿಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಐದು ಸಾವಿರ ಭಕ್ತರು ಧರ್ಮಸ್ಥಳ ಭೇಟಿ: ದೇವಸ್ಥಾನದ ಎದುರು ಭಕ್ತರು ಸಾಮೂಹಿಕವಾಗಿ ‘ಶಿವಪಂಚಾಕ್ಷರಿ ಪಠಣ’

ಜನಪ್ರತಿನಿಧಿಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಐದು ಸಾವಿರ ಭಕ್ತರು ಧರ್ಮಸ್ಥಳ ಭೇಟಿ: ದೇವಸ್ಥಾನದ ಎದುರು ಭಕ್ತರು ಸಾಮೂಹಿಕವಾಗಿ ‘ಶಿವಪಂಚಾಕ್ಷರಿ ಪಠಣ’


ಉಜಿರೆ: ದೇವರ ಅನುಗ್ರಹದಿಂದ ಸತ್ಯದ ಅನಾವರಣವಾಗುತ್ತಿರುವುದು ಸಂತಸವಾಗಿದೆ. ಧರ್ಮಸ್ಥಳಧ ಭಕ್ತರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳ ಶ್ರದ್ಧಾ-ಭಕ್ತಿಯ ಪ್ರೋತ್ಸಾಹದಿಂದ ಎಲ್ಲಾ ಸೇವಾ ಕಾರ್ಯಗಳನ್ನು ಮುಂದುವರಿಸುವ ಉತ್ಸಾಹ ಮೂಡಿಬಂದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.


ಮಂಗಳೂರು, ಮೂಡಬಿದ್ರೆ, ಬಂಟ್ವಾಳ, ಸುರತ್ಕಲ್, ಉಳ್ಳಾಲ ಹಾಗೂ ಬೆಳ್ತಂಗಡಿ ತಾಲ್ಲೂಕುಗಳಿಂದ ಸುಮಾರು ಐದು ಸಾವಿರ ಮಂದಿ ಭಕ್ತಾದಿಗಳು ಹಾಗೂ ಅಭಿಮಾನಿಗಳು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸೋಮಾವರ ಧರ್ಮಸ್ಥಳಕ್ಕೆ ಬಂದು ಹೆಗ್ಗಡೆಯವರಿಗೆ ಶ್ರದ್ಧಾ ಭಕ್ತಿಯಿಂದ ಗೌರವಾರ್ಪಣೆ ಮಾಡಿದರು.


ಅಣ್ಣಪ್ಪ ಸ್ವಾಮಿ ಬೆಟ್ಟದ ಬಳಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಎಲ್ಲರೂ ದೇವಸ್ಥಾನದ ಎದುರು ಸಾಮೂಹಿಕವಾಗಿ ‘ಶಿವಪಂಚಾಕ್ಷರಿ ಪಠಣ’ ಮಾಡಿದರು. ನಂತರ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.


ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್‌ಕುಮಾರ್ ಕಟೀಲು, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಶಾಸಕರುಗಳಾದ ಹರೀಶ್ ಪೂಂಜ, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ರಾಜೇಶ್ ನಾಕ್, ಜಿಲ್ಲಾ ಬಿ.ಜೆ.ಪಿ. ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಹರಿಕೃಷ್ಣ ಬಂಟ್ವಾಳ, ಮೂಡಬಿದ್ರೆಯ ಡಾ. ಎಮ್. ಮೋಹನ ಆಳ್ವ, ಕೆ.ಪಿ. ಜಗದೀಶ್ ಅಧಿಕಾರಿ, ವಕೀಲ ಬಾಹುಬಲಿ ಪ್ರಸಾದ್, ಕೃಷ್ಣರಾಜ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.







Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article