
ಸರಕಾರ ಮತ್ತು ರೈತರ ಮಧ್ಯೆ ಕೃಷಿಕ ಸಮಾಜ ಕೊಂಡಿಯಾಗಿ ಕಾರ್ಯನಿರ್ವಹಿಸಿದಾಗ ಅಭುವೃದ್ಧಿಕಾಣಲು ಸಾಧ್ಯ: ಎಂಎಲ್‌ಸಿ ಮಂಜುನಾಥ ಭಂಡಾರಿ
ಸೋಮವಾರ ಕೃಷಿ ಕಚೇರಿ ಬಳಿ ಬಂಟ್ವಾಳ ತಾಲೂಕು ಕೃಷಿಕ ಸಮಾಜದ ವತಿಯಿಂದ ಸುಮಾರು 1 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮೊದಲಹಂತದ ‘ಕೃಷಿಕ ಸಮಾಜ ಭವನ’ ಲೋಕಾರ್ಪಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿಕ ಸಮಾಜ ಭವನ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಉದ್ಘಾಟಿಸಿ ಮಾತನಾಡಿ, ದ.ಕ. ಜಿಲ್ಲೆಯ ಕೃಷಿಕರು ಭತ್ತದ ಕೃಷಿಯ ಜೊತೆ ಲಾಭದಾಯಕವಾದ ತೋಟಗಾರಿಕೆ ಬೆಳೆಯಲ್ಲು ಅವಲಂಭಿತರಾಗಿದ್ದಾರೆ. ಬಂಟ್ವಾಳ ತಾಲೂಕು ಅತೀ ಹೆಚ್ಚು ಸಣ್ಣ ರೈತರನ್ನು ಹೊಂದಿದ್ದು, ಇಲ್ಲಿನ ಮಣ್ಣಿಗೆ ಅನುಗುಣವಾಗಿ ಕಾಫಿ ಸಹಿತ ಪರ್ಯಾಯ ಬೆಳೆಯ ಕುರಿತಾಗಿ ಮಾಹಿತಿ ನೀಡುವ ಕೆಲಸ ಅಧಿಕಾರಿಗಳಿಂದಾಗಬೇಕು ಎಂದರು.
ಅಂತರ್ಜಲ ಹೆಚ್ವಿಸುವ ನಿಟ್ಟಿನಲ್ಲಿ ಮೂರು ಜಿಲ್ಲೆಗೆ ಸೀಮಿತವಾಗಿ ಪಶ್ಚಿಮವಾಹಿನಿ ಯೋಜನೆ ಜಾರಿಗೆ ತಂದ ಬಳಿಕ ಅಲ್ಲಲ್ಲಿ ಚೆಕ್ ಡ್ಯಾಂ ನಿರ್ಮಾಣ ದಿಂದಾಗಿ ಅಂತರ್ಜಲದ ಜತೆಗೆ ವರತೆಯ ಪ್ರಮಾಣದಲ್ಲು ಹೆಚ್ಚಳವಾಗಿದೆ. ಕೃಷಿಕರ ಅನುಕೂಲಕ್ಕೆ ತಕ್ಕಂತೆ ಕಾಲಕಾಲದಲ್ಲಿ ಹವಾಮಾನದಲ್ಲು ಬದಲಾವಣೆಯಾಗುತ್ತಿದು, ರೈತರಲ್ಲು ಪರಿಸರದ ಬಗ್ಗೆ ಜಾಗೃತಿ ಉಂಟಾಗಿದೆ ಎಂದರು.
ಕೃಷಿಕ ಸಮಾಜದ ಆಡಳಿತ ಅಧ್ಯಕ್ಷ ಮಂಜುನಾಥ ಗೌಡ ಎಸ್.ಆರ್. ಅವರು ಮಾತನಾಡಿದರು.
ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪುರಸಭಧ್ಯಕ್ಷ ವಾಸುಪೂಜಾರಿ ಲೊರೆಟ್ಟೋ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿಕುಂದರ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯಕುಮಾರ್ ರೈ, ಕೋಶಾಧಿಕಾರಿ ಚಂದ್ರ ಕೋಲ್ಚಾರ್, ಮಾಜಿ ಜಿ.ಪಂ. ಸದಸ್ಯರುಗಳಾದ ಎ.ಸಿ. ಭಂಡಾರಿ, ಪದ್ಮಶೇಖರ ಜೈನ್, ಬಂಟ್ವಾಳ ಕೃಷಿ ಸಹಾಯಕ ನಿರ್ದೇಶಕಿ ವೀಣಾ ಕೆ.ಆರ್., ಬಂಟ್ವಾಳ ಹಿರಿಯ ತೋಟಗಾರಿಕಾ ನಿರ್ದೇಶಕರಾದ ಪ್ರದೀಪ್ ಡಿಸೋಜಾ, ಬಂಟ್ವಾಳ ಕೃಷಿ ಅಧಿಕಾರಿ ನಂದನ್ ಶೆಣೈ, ಎಂಆರ್ ಪಿಎಲ್ ಅಧಿಕಾರಿ ಕೃಷ್ಣಹೆಗ್ಡೆ ಅತಿಥಿಗಳಾಗಿ ಭಾಗವಹಿಸಿದ್ದರು.
ಕೃಷಿಕ ಸಮಾಜದ ಕಾರ್ಯದರ್ಶಿ ರಮಾನಾಥ ವಿಟ್ಲ, ಪದಾಧಿಕಾರಿಗಳಾದ ಆಲ್ಬಟ್೯ ಮಿನೇಜಸ್, ಗಣೇಶ್ ಶೆಟ್ಟಿ ಗೋಳ್ತಮಜಲು, ಬದ್ರುದ್ದೀನ್ ಮಂಚಿ, ರಮೇಶ್ ನೆಟ್ಲ, ದೇವದಾಸ ರೈ ಕೆಲಿಂಜ, ಮಹಮ್ಮದ್ ನಂದರಬೆಟ್ಟು, ಎಸ್.ಎನ್. ಹೊಳ್ಳ ನರಿಕೊಂಬು, ವಿಶ್ವನಾಥ ನಾಯ್ಕ್ ಮಂಚಿ, ಕೆ. ಮೋಹನ ಆಚಾರ್ಯ, ರಹಮತುಲ್ಲ ಉಪಸ್ಥಿತರಿದ್ದರು.
ಈ ಸಂದರ್ಭ ಜಿಲ್ಲಾ ಮಟ್ಟದ ಭತ್ತಬೆಳೆ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಕ್ರಮವಾಗಿ ಬಂಟ್ವಾಳ ತಾ.ನ ಲೀಲಾ ಅಣ್ಣುಗೌಡ, ಡಾಲಿ ವಿ.ಜೆ. ಅವರನ್ನು ಸನ್ಮಾನಿಸಲಾಯಿತು.
ತಾಲೂಕಿನ ಕೃಷಿಸಖಿ, ಪಶು ಸಖಿಯರಿಗೆ ಅಭಿನಂದಿಸಲಾಯಿತು. ತುಂತುರ ನೀರಾವರಿ ಯೋಜನೆಯಡಿ ಫಲಾನುಭವಿ ರೈತರಿಗೆ ವಿವಿಧ ಕೃಷಿ ಸಲಕರಣೆ ವಿತರಿಸಲಾಯಿತು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ಅವರು ಸ್ವಾಗತಿಸಿ, ಕಟ್ಟಡ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಕಲ್ಲಡ್ಕ ಪ್ರಸ್ತಾವನೆಗೈದರು. ಕೃಷಿಕ ಸಮಾಜದ ಉಪಾಧ್ಯಕ್ಷ ಉಮ್ಮರ್ ಬಿ. ವಂದಿಸಿ, ಬಾಲಕೃಷ್ಣ ಆಳ್ವ ಕೋಡಾಜೆ ಕಾರ್ಯಕ್ರಮ ನಿರೂಪಿಸಿದರು.