ಅಬಕಾರಿ ಪೊಲೀಸರಿಂದ ಕಾರ್ಯಾಚರಣೆ: ನಂದಾವರದಲ್ಲಿ ಪಿಕಪ್ ಬಿಟ್ಟು ಚಾಲಕ ಪರಾರಿ
Friday, September 26, 2025
ಬಂಟ್ವಾಳ: ಬೊಲೆರೋ ಪಿಕಪ್ ವಾಹನವೊಂದು ಬಂಟ್ವಾಳ ಅಬಕಾರಿ ನಿರೀಕ್ಷಕರ ಸೂಚನೆಯನ್ನು ದಿಕ್ಕರಿಸಿ ವಾಹನ ಸಹಿತ ಪರಾರಿಯಾದ ಚಾಲಕ ವಾಹನವನ್ನು ನಂದಾವರ ರೈಲ್ವೆ ಟ್ರಾಕ್ ಬಳಿಯ ಅಜ್ಞಾತ ಸ್ಥಳದಲ್ಲಿ ನಿಲುಗಡೆಗೊಳಿಸಿ ಪರಾರಿಯಾದ ಘಟನೆ ನಡೆದಿದೆ.
ಕೆಎ-70-6904 ನೇ ಬೊಲೋರೋ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದೆಯೆಂಬ ಮಾಹಿತಿಯಧಾರದಲ್ಲಿ ಮಂಗಳೂರು ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ ಬಂಟ್ವಾಳ ಅಬಕಾರಿ ನಿರೀಕ್ಷಕ ಲಕ್ಷ್ಮಣ್ ಮತ್ತವರ ಸಿಬ್ಬಂದಿಗಳು ಬಿ.ಸಿ.ರೋಡು ಪರಿಸರದಲ್ಲಿ ಮಂಗಳೂರು ಕಡೆಯಿಂದ ಬಂದ ಶಂಕಿತ ಬೊಲೆರೋ ಪಿಕಪ್ ವಾಹನ ನಿಲ್ಲಿಸಲು ಸೂಚಿಸಿದರು.
ಆದರೆ ವಾಹನದ ಚಾಲಕ ಅಬಕಾರಿ ನಿರೀಕ್ಷಕರ ಸೂಚನೆಯನ್ನು ದಿಕ್ಕರಿಸಿ ಅಲಡ್ಕ ದತ್ತ ಸಾಗಿದ್ದ ಅಲ್ಲಿಗೆ ಪೊಲೀಸರು ತಲುಪಿದಾಗ ಇವರ ವಾಹನ ಕೆಸರಿನಲ್ಲಿ ಸಿಲುಕಿದ್ದು, ಇಲ್ಲಿಂದ ತೆರಳುವಷ್ಟರಲ್ಲಿ ಚಾಲಕ ಪಿಕಪನ್ನು ನಂದಾವರ ರೈಲ್ವೆ ಟ್ರಾಕ್ ಬಳಿ ನಿಲ್ಲಿಸಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಪಿಕಪ್‌ನಲ್ಲಿ ಪೊಲೀಸರಿಗೆ ಬೇಕಾದ ಯಾವುದೇ ವಸ್ತು ಪತ್ತೆಯಾಗಿಲ್ಲ ಎನ್ನಲಾಗಿದ್ದು, ಪಿಕಪನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.