
ಹುಲಿವೇಷ ಪೊಟೋ ದುರುಪಯೋಗ: ಕೇಸುದಾಖಲು
Tuesday, September 2, 2025
ಬಂಟ್ವಾಳ: ಬಿ.ಸಿ.ರೋಡಿನ ಗಣೇಶೋತ್ಸವದ ಶೋಭಾಯಾತ್ರೆಗೆ ಮುನ್ನ ಕೈಕಂಬದ ಅಂಗಡಿಯೊಂದರ ಎದುರು ಕ್ಲಿಕ್ಕಿಸಿದ ಹುಲಿವೇಷಧಾರಿಗಳ ಪೊಟೋವನ್ನು ದುರುಪಯೋಗ ಪಡಿಸಿ ಪ್ರಚೋದನಕಾರಿ ಸುಳ್ಳು ಬರಹವನ್ನು ವಾಟ್ಸಪ್ ಗ್ರೂಪನಲ್ಲಿ ಹರಿಯಬಿಟ್ಟಿರುವುದನ್ನು ಪ್ರಶ್ನಿಸಿದವರಿಗೆ ಜೀವಬೆದರಿಕೆ ಒಡ್ಡಿರುವ ಘಟನೆ ನಡೆದಿದೆ.
ಕೈಕಂಬದ ಇರ್ಫಾನ್ ಎಂಬವರ ಅಂಗಡಿಯಲ್ಲಿ ಹುಲಿವೇಷಗಳ ಪೊಟೋ ಕ್ಲಿಕ್ಕಿಸಿದ ಶಫೀಕ್ ಎಂಬಾತ ಬಳಿಕ ಈ ಪೊಟೋವನ್ನು ದುರುಪಯೋಗ ಪಡಿಸಿ ಪ್ರಚೋದನಕಾರಿ ಸುಳ್ಳು ಬರಹಗಳನ್ನು ಬರೆದು ವಾಟ್ಸಪ್ ಗ್ರೂಪನಲ್ಲಿ ಹರಿಯಬಿಟ್ಟಿದ್ದನೆನ್ನಲಾಗಿದೆ.
ಇದನ್ನು ಇರ್ಫಾನ್ ಆರೋಪಿ ಶಫೀಕ್‌ನ ಅಣ್ಣ ಸಫ್ವಾನ್‌ನಲ್ಲಿ ಪ್ರಶ್ನಿಸಿದಾಗ ಅವಾಚ್ಯವಾಗಿ ನಿಂದಿಸಿ, ಜೀವಬೆದರಿಕೆ ಒಡ್ಡಿದ್ದಾನೆಂದು ಆರೋಪಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.