ನಾಯಕತ್ವಕ್ಕೆ ನಿಖರ ಗುರಿ, ಸಮರ್ಥ ಹೊಣೆಗಾರಿಕೆ ಅಗತ್ಯ: ಡಾ. ಕವಿತಾ ಕೆ.ಆರ್.
ನಗರದ ಬೆಸೆಂಟ್ ಮಹಿಳಾ ಕಾಲೇಜಿನ 2025-26ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಆಂಗ್ಲ ಭಾಷೆಯ ‘ಲೀಡರ್’ ಪದದ ಅರ್ಥವನ್ನು ವಿವರಿಸುತ್ತ ವಿದ್ಯಾರ್ಥಿಗಳು ಸಮಾಜದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸುವ ಜೊತೆಗೆ ಶ್ರೇಷ್ಠ ನಾಯಕರಿಂದ ಸ್ಪೂರ್ತಿ ಪಡೆದು ಸ್ವಾವಲಂಬಿ ನಡೆಸಲು ವಿದ್ಯಾರ್ಥಿ ಸಂಘವು ಪ್ರೇರಣೆ ನೀಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ಡಾ. ಕವಿತಾ ಕೆ.ಆರ್. ಅವರನ್ನು ಸನ್ಮಾನಿಸಲಾಯಿತು.
ಸಭಾಧ್ಯಕ್ಷತೆ ವಹಿಸಿದ್ದ ಮಹಿಳಾ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಣೇಲ್ ಅಣ್ಣಪ್ಪ ನಾಯಕ್ ಅವರು, ವಿದ್ಯಾರ್ಥಿ ಸಂಘದ ಚಟುವಟಿಕೆಗಳು ಯಶಸ್ವಿಯಾಗಿ ನೆರವೇರಲೆಂದು ಶುಭಹಾರೈಸಿದರು.
ವಿದ್ಯಾರ್ಥಿ ಸಂಘದ ನಾಯಕಿ ಮೇಘನಾ ಜಿ.ಪೈ ಅವರು ನೂತನ ವಿದ್ಯಾರ್ಥಿ ಪದಾಧಿಕಾರಿಗಳನ್ನು, ಕಾರ್ಯದರ್ಶಿಗಳು ಮತ್ತು ತರಗತಿ ಪ್ರತಿನಿಧಿಗಳನ್ನು ಪರಿಚಯಿಸಿದರು. ವಿವಿಧ ನಿಕಾಯಗಳ ಮುಖ್ಯಸ್ಥರು ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಕುಮಾರ್ ಕೆ.ಸಿ. ಪ್ರತಿಜ್ಞಾವಿಧಿ ಬೋಧಿಸಿದರು.
ಸಮಾರಂಭದಲ್ಲಿ ಬೆಸೆಂಟ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ. ರಾಜಶೇಖರ್ ಹೆಬ್ಬಾರ್, ವಿದ್ಯಾರ್ಥಿ ಸಂಘದ ಸಂಚಾಲಕ ಡಾ. ಗಿರಿಯಪ್ಪ, ವಿದ್ಯಾರ್ಥಿ ಪದಾಧಿಕಾರಿಗಳು, ಐಕ್ಯೂಎಸಿ ಸಂಯೋಜಕ ಡಾ. ಸತೀಶ ಕೆ., ನ್ಯಾಕ್ ಸಂಯೋಜಕಿ ಪ್ರೊ. ರಂಜಿನಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಸಂಚಾಲಕ ಡಾ. ಗಿರಿಯಪ್ಪ ಸ್ವಾಗತಿಸಿ, ಗೃಹ ವಿಜ್ಞಾನ ವಿಭಾಗದ ಉಪನ್ಯಾಸಕಿ ಪೃಥ್ವಿ ಎಂ. ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರಾದ ಸಾಕ್ಷಿ ಅಮೀನ್, ಸೃಷ್ಟಿ, ಮಿಶಾ, ಸಂಗೀತಾ ಶೇಟ್ ಪ್ರಾರ್ಥಿಸಿದರು. ಮುಸ್ಕಾನ್ ಸಭಾ ಕಾರ್ಯಕ್ರಮದ ನಿರೂಪಿಸಿದರು. ವಿದ್ಯಾರ್ಥಿ ಕಾರ್ಯದರ್ಶಿ ಚರಿತಾ ಎಂ. ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಲಲಿತಕಲಾ ಸಂಘದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ವಿದ್ಯಾರ್ಥಿನಿ ಮೇಘಶ್ರೀ ಕಾರ್ಯಕ್ರಮ ನಿರೂಪಿಸಿದರು.