
ಅಕ್ರಮ ಮರಳು ದಾಸ್ತಾನು ಪತ್ತೆ
Tuesday, September 2, 2025
ಬಂಟ್ವಾಳ: ತಾಲೂಕಿನ ಕರ್ಪೆ ಗ್ರಾಮದ ಶಿಕ್ಷೆ ಗುಡ್ಡೆಯ ವಿನೋದ ಎಂಬವರ ಮನೆಯ ಮುಂದೆ ಖಾಲಿ ಜಾಗದಲ್ಲಿ ಅಕ್ರಮವಾಗಿ ಮರಳು ಶೇಖರಿಸಿಟ್ಟಿರುವುದನ್ನು ಪತ್ತೆ ಹಚ್ಚಿರುವ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತವರ ತಂಡ ಮುಟ್ಟುಗೋಲು ಹಾಕಿದೆ.
ಸುಮಾರು 1 ಲೋಡು ಪಿಕಫ್ ಮರಳನ್ನು ಶೇಖರಿಸಿಟ್ಟಿದ್ದು, ಸ್ಥಳೀಯ ನದಿಯಿಂದ ಅಕ್ರಮವಾಗಿ ಮರಳು ಕಳವುಗೈದು ಅಧಿಕ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಮರಳನ್ನು ಸಂಗ್ರಹಿಸಿಡಲಾಗಿದೆ ಎಂದು ಹೇಳಲಾಗಿದೆ.ಈ ಸಂದರ್ಭ ಆರೋಪಿ ವಿನೋದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತವರ ತಂಡ ಗಸ್ತಿನಲ್ಲಿದ್ದಾಗ ಆರೋಪಿಯೂ ಮನೆಯಂಗಳದಲ್ಲಿ ಮರಳು ಶೇಖರಿಸಿಟ್ಟಿರುವುದು ಪತ್ತೆಯಾಗಿದೆಯೆನ್ನಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.