
ಯೋಗಾಸನ ರಾಜ್ಯಮಟ್ಟಕ್ಕೆ ಆಯ್ಕೆಯಾದ ಹರ್ಷಿತ್
Tuesday, September 2, 2025
ಪುತ್ತೂರು: ವಿದ್ಯಾಭಾರತಿ ವತಿಯಿಂದ ಮೂಡಬಿದಿರೆಯ ಕಡಲೆಕೆರೆ ಪ್ರೇರಣಾ ಅನುದಾನಿತ ಹಿರಿಯಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಉಪ್ಪಿನಂಗಡಿ ಶ್ರೀರಾಮ ಪ್ರೌಢ ಶಾಲೆಯ ವಿದ್ಯಾರ್ಥಿ ಹರ್ಷಿತ್ ಗೌಡ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಶ್ರೀರಾಮ ಶಾಲೆಯಲ್ಲಿ ೮ನೇ ತರಗತಿಯಲ್ಲಿ ಕಲಿಯುತ್ತಿರುವ ಹರ್ಷಿತ್ ಗೌಡ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಮಣಿಕ್ಕಳ ಬಾಳೆಹಿತ್ತಿಲು ನಿವಾಸಿ ಬೆಳಿಯಪ್ಪ ಗೌಡ ಹಾಗೂ ಯಶೋದಾ ದಂಪತಿಗಳ ಪುತ್ರ.