
ರಾಜಕೇಸರಿ ಸೇವಾ ಟ್ರಸ್ಟ್‌ನಿಂದ ಸ್ವಚ್ಛಾಶೌಚಾಲಯ ಅಭಿಯಾನ
Monday, September 1, 2025
ಬೆಳ್ತಂಗಡಿ: ರಾಜಕೇಸರಿ ಸ್ವಚ್ಛಾಲಯ ಅಭಿಯಾನ 2024-25ರ ಯೋಜನೆಯಡಿ ಆ.31 ರಂದು ಬೆಳ್ತಂಗಡಿ ತಾಲೂಕಿನ ಹುಣ್ಸೆಕಟ್ಟೆಯಲ್ಲಿರುವ ದ.ಕ. ಜಿ.ಪ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ ‘ರಾಜಕೇಸರಿ ಸೇವಾ ಟ್ರಸ್ಟ್ (ರಿ) ಬೆಳ್ತಂಗಡಿ’ ಘಟಕದ ಸ್ವಯಂಸೇವಕರಿಂದ ಶ್ರಮದಾನದ ಮೂಲಕ ದುರಾವಸ್ಥೆಯಲ್ಲಿದ್ದ ಶೌಚಾಲಯಗಳನ್ನು ಸ್ವಚ್ಛಗೊಳಿಸಿ, ನವೀಕರಿಸಿ ಸ್ವಚ್ಛಾಶೌಚಾಲಯಗಳನ್ನಾಗಿ ಪರಿವರ್ತಿಸಲಾಯಿತು.
ರಾಜಕೇಸರಿ ಸೇವಾ ಟ್ರಸ್ಟ್ (ರಿ) ಕರ್ನಾಟಕ ಇದರ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಅವರ ನೇತೃತ್ವದಲ್ಲಿ ನಡೆದ ಸೇವಾ ಕಾರ್ಯದಲ್ಲಿ ಸತೀಶ್, ಸಂದೀಪ್, ಸಂಪತ್, ವಿನೋದ್, ದೇವರಾಜ್, ಜಗದೀಶ್, ಶರತ್, ಲೋಹಿತ್, ಪ್ರವೀಣ್ ಆಚಾರ್ಯ, ಸಂದೇಶ್ ಅವರು ಸ್ವಯಂಸೇವಕರಾಗಿ ಪಾಲ್ಗೊಂಡಿದ್ದರು.
ಬಡ ಮಕ್ಕಳ ಆರೋಗ್ಯ, ನೈರ್ಮಲ್ಯ, ಮತ್ತು ಹಕ್ಕು ಸಂರಕ್ಷಣೆಯ ಹಿತದೃಷ್ಟಿಯಿಂದ ಸಂಸ್ಥೆಯ ವತಿಯಿಂದ ಈವರೆಗೆ 15 ಸರಕಾರಿ ಪ್ರಾಥಮಿಕ ಶಾಲೆಗಳ ಶೌಚಾಲಯಗಳನ್ನು ದುರಸ್ತಿಗೊಳಿಸಿ, ನವೀಕರಿಸಿ ಸ್ವಚಾಲಯಗಳನ್ನಾಗಿ ಪರಿವರ್ತಿಸಲಾಗಿದೆ.