
ಅಕ್ರಮ ಮದ್ಯ ತಯಾರಿಕೆ ಘಟಕಕ್ಕೆ ದಾಳಿ: ಇಬ್ಬರ ಬಂಧನ
Monday, September 1, 2025
ದೇರಳಕಟ್ಟೆ: ಅಕ್ರಮ ಮದ್ಯ ತಯಾರಿ ನಡೆಸುತ್ತಿದ್ದ ಮನೆಗೆ ದಾಳಿ ನಡೆಸಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ.
ಬಂಧಿತರನ್ನು ಕಾಸರಗೋಡು ನಿವಾಸಿ ಪ್ರಣವ್ ವಿ ಶೆಣೈ (24) ಮತ್ತು ತಾಳಿಪಡ್ಪು ನಿವಾಸಿ ಅನೂಷ್ ಆರ್. (24) ಎಂದು ಗುರುತಿಸಲಾಗಿದೆ.
ಆರೋಪಿಗಳು
ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರು ಗ್ರಾಮದ ಕಂಬಳಪದವು ಶ್ರೀ ದುರ್ಗಾ ಕಾಳಿ ದೇವಸ್ಥಾನದ
ರಸ್ತೆಯಲ್ಲಿರುವ ಮನೆಯಲ್ಲಿ ತೋಮಸ್ ಮತ್ತು ಮಣಿಕುಟ್ಟನ್ ಜೊತೆ ಸೇರಿಕೊಂಡುಅಕ್ರಮವಾಗಿ
ಮದ್ಯ ತಯಾರಿ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ದಾಳಿ ಸಂದರ್ಭದಲ್ಲಿ ತೋಮಸ್ ಮತ್ತು ಮಣಿಕುಟ್ಟನ್ ಪರಾರಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಪೊಲೀಸರು ಮನೆಗೆ ಕರೆದುಕೊಂಡು ಹೋಗಿ ಮಹಜರು ನಡೆಸಿದ್ದು,
ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದಾಗ ಸುಮಾರು 1,15,110 ಮೌಲ್ಯ ದ ಅಕ್ರಮ
ಮದ್ಯ ತಯಾರಿಕೆ ಯ ಮೂರು ಮೆಷಿನ್ ಗಳು, ಮಿಕ್ಸರ್ ಮೆಷಿನ್, ಅಕ್ರಮ ಮದ್ಯದ ಬಾಟ್ಲಿಗಳು,
ಗೋವ ರಾಜ್ಯದಲ್ಲಿ ಮಾತ್ರ ಮಾರಾಟ ಮಾಡುವ ಪರವಾನಿಗೆ ಇರುವ 8 ಮನ್ಶನ್ ಹೌಝ್ ಎಂಬ ಹೆಸರಿನ
ಮದ್ಯದ ಬಾಟ್ಲಿಗಳು , ಮದ್ಯ ತಯಾರಿಕೆಗೆ ಬೇಕಾದ ಇತರ ಸೊತ್ತುಗಳನ್ನು ಪತ್ತೆ ಹಚ್ಚಿ
ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್
ಆಯುಕ್ತ ಸುಧೀರ್ ಕುಮಾರ್ ರೆಡ್ಡಿಯವರ ಮಾರ್ಗದರ್ಶನದಂತೆ, ಕಾನೂನು ಸುವ್ಯವಸ್ಥೆ ವಿಭಾಗದ
ಪೊಲೀಸ್ ಉಪ ಆಯುಕ್ತ ಮಿಥುನ್ ಹೆಚ್ ಎನ್. ಐಪಿಎಸ್ ಮತ್ತು ಅಪರಾಧ & ಸಂಚಾರ
ವಿಭಾಗದ ಪೊಲೀಸ್ ಉಪ ಆಯುಕ್ತ ರವಿ ಶಂಕರ ರವರ ನಿರ್ದೇಶನದಂತೆ, ಮಂಗಳೂರು ದಕ್ಷಿಣ
ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವಿಜಯಕ್ರಾಂತಿ ರವರ ನೇತೃತ್ವದಲ್ಲಿ ಕೊಣಾಜೆ ಪೊಲೀಸ್
ಠಾಣೆಯ ಪ್ರಭಾರ ನಿರೀಕ್ಷಕ ವಿರೂಪಾಕ್ಷ, ಪಿಎಸ್ಐ ನಾಗರಾಜ್ ಸಿಬ್ಬಂದಿಗಳಾದ ಹೆಚ್
ಸಿ ಶೈಲೇಂದ್ರ, ಪಿಸಿ ರಮೇಶ್, ಬಸವನ ಗೌಡ ಮತ್ತು ರಮೇಶ್ ರವರುಗಳು ಕಾರ್ಯಚರಣೆಯಲ್ಲಿ
ಭಾಗವಹಿಸಿದ್ದರು.