ಪ್ರೀತಿ ನಿರಾಕರಣೆ: ಪ್ರೇಯಸಿಗೆ ಹತ್ಯೆಗೆ ಯತ್ನ: ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು-ಪ್ರಿಯಕರ ಆತ್ಮಹತ್ಯೆ
Friday, September 12, 2025
ಬ್ರಹ್ಮವರ: ಬ್ರಹ್ಮಾವರ ತಾಲೂಕು ಕೊಕ್ಕರ್ಣೆ ಎಂಬಲ್ಲಿ ಹುಚ್ಚು ಪ್ರೇಮಿಯೊಬ್ಬ ತನ್ನ ಪ್ರೇಯಸಿಯು ಪ್ರೇಮ ನಿರಾಕರಣೆ ಮಾಡಿದಳು ಎಂಬ ಕಾರಣದಿಂದ ಅವಳ ಹುಟ್ಟುಹಬ್ಬವಾದ ಶುಕ್ರವಾರವೇ ಅವಳನ್ನು ತಿವಿದು ಹತ್ಯೆ ಮಾಡಲು ಯತ್ನಿಸಿದ್ದು, ಪ್ರೇಯಸಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಪ್ರಿಯಕರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಕ್ಕರ್ಣೆ ಹತ್ಯಾ ಯತ್ನ ಪ್ರಕರಣದಲ್ಲಿ ಹುಚ್ಚು ಪ್ರೇಮಿಯಿಂದ ತೀವ್ರ ಚಾಕು ಇರಿತಕ್ಕೆ ಒಳಗಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ರಕ್ಷಿತಾ ಸಂಜೆಯ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಇತ್ತ ತನ್ನ ಪ್ರೇಮಿಯಾದ ಆಕೆಗೆ ಚಾಕು ಇರಿದು ಹತ್ಯೆಗೆ ಯತ್ನಿಸಿದ್ದ ಆರೋಪಿ, ಆಕೆಯ ಪಕ್ಕದ ಮನೆಯ ಕಾರ್ತಿಕ್ ನನ್ನು ಬೆಳಿಗ್ಗೆಯಿಂದಲೂ ಪೊಲೀಸರು ಹುಡುಕುತ್ತಿದ್ದರು. ಇದೀಗ ಆತನ ಮನೆ ಸಮೀಪದ ಬಾವಿಯಲ್ಲಿ ಆತನ ಶವ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಅಂತೂ ತನ್ನ ಪ್ರೇಮಿಯನ್ನು ಆಕೆಯ ಹುಟ್ಟಿದ ದಿನವೇ ಸಾಯಿಸಿ ಕುಖ್ಯಾತಿಗೊಳಗಾದ ಈ ಅಮರ ಪ್ರೇಮಿ ಕಾರ್ತಿಕ್ ತಾನೂ ಆತ್ಮಹತ್ಯೆ ಗೈದು ಒಂದು ದುರಂತ ಅಧ್ಯಾಯವನ್ನೇ ಸೃಷ್ಟಿಸಿದ್ದಾನೆ.