ಬಿಸ್ಲೆ ಘಾಟ್ ರಸ್ತೆ: ಮಣ್ಣು ಕುಸಿತ
Friday, September 5, 2025
ಸುಬ್ರಹ್ಮಣ್ಯ: ಬಾರೀ ಮಳೆಯಿಂದ ಕುಕ್ಕೆ ಸುಬ್ರಹ್ಮಣ್ಯ-ಬಿಸ್ಲೆ ಘಾಟ್ ರಸ್ತೆಯ ಬಿಸ್ಲೆ ಘಾಟ್ ಸಮೀಪ ರಸ್ತೆಗೆ ಮಣ್ಣು ಕುಸಿದು ಕೆಲ ಕಾಲ ವಾಹನ ಸಂಚಾರಕ್ಕೆ ಅಡಚನೆ ಉಂಟಾದ ಘಟನೆ ಬುಧವಾರ ಸಂಭವಿಸಿದೆ.
ಬಿಸ್ಲೆಘಾಟ್ ರಸ್ತೆಯ ಗಡಿ ದೇವಸ್ಥಾನದಿಂದ 1 ಕಿ.ಮೀ. ದೂರದಲ್ಲಿ ರಸ್ತೆಗೆ ಮಣ್ಣು ಕುಸಿತಗೊಂಡಿದ್ದು, ಘಟನೆ ಮಾಹಿತಿ ತಿಳಿಯುತ್ತಲೇ ಸಂಬಂಸಿದವರು ರಸ್ತೆಗೆ ಕುಸಿದು ಬಿದ್ದ ಮಣ್ಣಿನ ತೆರವು ಮಾಡುವ ಕಾರ್ಯಾಚರಣೆ ಮಾಡಲಾಯಿತು. ಬಳಿಕ ವಾಹನ ಸಂಚಾರಕ್ಕೆ ಸುಗಮ ವ್ಯವಸ್ಥೆ ಮಾಡಲಾಯಿತು. ಕುಕ್ಕೆ ಸುಬ್ರಹ್ಮಣ್ಯ ಪರಿಸರದ ವಿವಿಧೆಡೆ ಬುಧವಾರ ಬಾರೀ ಮಳೆಯಾಗಿದೆ.