
ಸೆ.22 ರಿಂದ ಅ.1: ಕುಂದಾಪುರದ ಖಾರ್ವಿ ಕೆಳಕೇರಿಯ ಶ್ರೀ ಉರ್ಮಾರಿ ದೇವಸ್ಥಾನದಲ್ಲಿ ನವರಾತ್ಯೋತ್ಸವ
Saturday, September 20, 2025
ಕುಂದಾಪುರ: ಇಲ್ಲಿನ ಖಾರ್ವಿ ಕೆಳಕೇರಿಯಲ್ಲಿರುವ ಶ್ರೀ ಉರ್ಮಾರಿ ದೇವಸ್ಥಾನದಲ್ಲಿ ಸೆ.22 ರಿಂದ ಅ.1ರ ವರೆಗೆ ನವರಾತ್ಯೋತ್ಸವ ನಡೆಯಲಿದೆ.
ಪ್ರತಿ ದಿನ ಬೆಳಗ್ಗೆ ಅಮ್ಮನವರಿಗೆ ವಿಶೇಷ ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 7 ರಿಂದ ಪ್ರತಿ ದಿನ ವಿವಿಧ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ರಾತ್ರಿ 8.30ಕ್ಕೆ ಹೂವಿನ ಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಲಿದೆ.
ಅ.1 ರಂದು ಬೆಳಗ್ಗೆ 10 ಗಂಟೆಗೆ ಕಲಶ ವಿಸರ್ಜನೆಯೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ ಎಂದು ಗಾಳಿ ಮನೆ ಕುಟುಂಬಸ್ಥರ ಪ್ರಕಟಣೆ ತಿಳಿಸಿದೆ.