17ನೇ ವಿಡಿಯೋ ರಿಲೀಸ್
Friday, September 26, 2025
ಮಂಗಳೂರು: ತಿಮರೋಡಿ ಮನೆಯಲ್ಲಿ ಚಿನ್ನಯ್ಯ ಮಾತುಕತೆ ನಡೆಸಿದ 17ನೇ ವಿಡಿಯೋ ರಿಲೀಸ್ ಆಗಿದೆ.
2023 ರ ಆಗಸ್ಟ್‌ನಲ್ಲಿ ಮಾಡಿದ ವಿಡಿಯೋ ಎನ್ನಲಾಗಿದ್ದು, ತಿಮರೋಡಿ ಮನೆಗೆ ಮೊದಲ ಭಾರೀ ಚಿನ್ನಯ್ಯ ಭೇಟಿ ನೀಡಿದ್ದ ಸಂದರ್ಭ ಮಾತುಕತೆ ನಡೆಸಿದ್ದು, ಎನ್ನಲಾಗುತ್ತಿದೆ.
17ನೇ ವಿಡಿಯೋದಲ್ಲಿಯೂ ಉದಯ್ ಜೈನ್ ಬಗ್ಗೆ ಮಾತನಾಡಿರುವ ಚಿನ್ನಯ್ಯ, ಧರ್ಮಸ್ಥಳದಲ್ಲಿ ಉದಯ್ ಜೈನ್‌ನಷ್ಟು ದೊಡ್ಡ ಕಾಮುಕ ಮತ್ತೊಬ್ಬನಿಲ್ಲ. ಧರ್ಮಸ್ಥಳದಲ್ಲಿ ನಂಬರ್ ವನ್ ಕಾಮುಕ. ಒಂಟಿ ಹೆಂಗಸು ಸಿಕ್ಕಿದರೆ ಅವನು ಏನು ಬೇಕಾದರೂ ಮಾಡುತ್ತಾನೆ. ನನಗೆ ಗೊತ್ತಿರುವ ಸತ್ಯವನ್ನು ನಾನು ಹೇಳುತ್ತಿದ್ದೇನೆ. ದೇವಸ್ಥಾನದಲ್ಲಿ ನನ್ನ ಮುಂದೆ ನಡೆದ ಸತ್ಯವನ್ನು ನಾನು ಹೇಳುತ್ತೇನೆ. ಸತ್ಯ ಹೇಳುವುದಕ್ಕೆ ನನಗೆ ಭಯವಿಲ್ಲ. ನನ್ನನ್ನು ಏನು ಕೊಂದು ಹಾಕ್ತಾರಾ..? ಅವನು ಮಾಡಿರೋದು ಹೌದು ಅಲ್ವಾ..? ಬೇರೆ ಆಟೋದವರು ಅವರಷ್ಟಕ್ಕೆ ಇರ್ತಾರೆ ಎಂದು ಮಾತನಾಡಿರುವ ವಿಡಿಯೋ ರಿಲೀಸ್ ಆಗಿದೆ.