ಕೆ.ಎಸ್.ಆರ್.ಟಿ.ಸಿ ನವೀಕೃತ ಶೌಚಾಲಯದ ಕಟ್ಟಡ ಉದ್ಘಾಟನೆ
Friday, September 26, 2025
ಮಂಗಳೂರು: ಕೆ.ಎಸ್.ಆರ್.ಟಿ.ಸಿ ಮಂಗಳೂರು ಬಸ್ಸು ನಿಲ್ದಾಣದ ಶೌಚಾಲಯದ ಕಟ್ಟಡದ ನವೀಕರಣ ಕಾಮಗಾರಿಯನ್ನು ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ (ಎಂ.ಆರ್.ಪಿ.ಎಲ್) ಇವರ 2023-24 ನೇ ಸಾಲಿನ ಸಿ.ಎಸ್.ಆರ್ ಅನುದಾನದಡಿಯಲ್ಲಿ ಒಟ್ಟು ರೂ.40 ಲಕ್ಷಗಳ ಕಾರ್ಯ ಯೋಜನೆಯಡಿಯಲ್ಲಿ ಸಂಪೂರ್ಣಗೊಳಿಸಲಾಗಿದ್ದು, ಗುರುವಾರ ಈ ನವೀಕೃತ ಕಟ್ಟಡವನ್ನು ಕಾರ್ಯಾರಂಭಗೊಳಿಸಲಾಯಿತು.
ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್‌ನ ಮುಖ್ಯ ಜನರಲ್ ಮ್ಯಾನೇಜರ್ ಮನೋಜ್ ಕುಮಾರ್ ಉದ್ಘಾಟಿಸಿದರು.
ಮಂಗಳೂರು ಕೆ.ಎಸ್.ಆರ್.ಟಿ.ಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ವಿಭಾಗೀಯ ಸಂಚಲನಾಧಿಕಾರಿ ಹೆಚ್.ಆರ್. ಕಮಲ್ ಕುಮಾರ್, ಲೆಕ್ಕಾಧಿಕಾರಿ ಹರೀಶ್ ಕೊಠಾರಿ, ವಿಭಾಗೀಯ ಯಾಂತ್ರಿಕ ಅಭಿಯಂತರ ವಿನಯ್, ಸಹಾಯಕ ಅಭಿಯಂತರ ಹರೀಶ್ ಯು.ಎನ್ ಶರತ್ ಕುಮಾರ್ ಎನ್, ಹಾಗೂ ಎಂಆರ್‌ಪಿಎಲ್ ಇಂಜಿನಿಯರ್ ಹರೀಶ್ ರಾವ್ ಉಪಸ್ಥಿತರಿದ್ದರು.