ಮೈಸೂರು ವಿಭಾಗ ಮಟ್ಟದ ಕ್ರೀಡಾಕೂಟ: ಮಂಗಳೂರಿಗೆ 25 ಪದಕ

ಮೈಸೂರು ವಿಭಾಗ ಮಟ್ಟದ ಕ್ರೀಡಾಕೂಟ: ಮಂಗಳೂರಿಗೆ 25 ಪದಕ


ಮಂಗಳೂರು: ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಉಡುಪಿಯಲ್ಲಿ ಭಾನುವಾರ ನಡೆದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮಂಗಳೂರಿನ ಇಮ್ಮೋರ್ಟಲ್ ಮಾರ್ಷಲ್ ಆರ್ಟ್ಸ್ ಆಂಡ್ ಫಿಟ್‌ನೆಸ್ ಅಕಾಡೆಮಿ ಹಾಗೂ ವುಶು ಆಸೊಸಿಯೇಷನ್ ಆಫ್ ದ.ಕ. ವಿದ್ಯಾರ್ಥಿಗಳು ವುಶು ಸ್ಪರ್ಧೆಯ ಸಾಂಡ ಹಾಗೂ ತೌಲೋ ಇದರ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿ 8 ಚಿನ್ನ, 5 ಬೆಳ್ಳಿ ಮತ್ತು 12 ಕಂಚಿನ ಪದಕಗಳೊಂದಿಗೆ ಒಟ್ಟು 25 ಪದಕಗಳನ್ನು ಗೆದ್ದುಕೊಂಡಿದ್ದಾರೆ.

ನಾಜ್‌ಮಿನ್, ರಮ್ಶಿನಾ, ರಿಷಾನ, ಕಶ್ವಿ, ಮರಿಯಂ, ಹರ್ಷಲ್ ಎನ್., ಕ್ಷಿತೀಜ್, ಪ್ರಜ್ವಲ್ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಮನ್‌ಶೂರ, ಭಾನ್ವಿ, ರಶ್ವೀನ್, ಶಮೀಉಲ್ಲಾ ಮತ್ತು ಧ್ರುವ ಇವರು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.  

ಸನ್ನಿಧಿ, ಮುಸಿಧಾ, ತುಹಾನಿ, ಮುಸ್ಲಿಹಾ, ಸಾನ್ವಿ ಪಿ., ಅಂಜನಾ, ಆಯಾಫಾ, ಸಾನ್ವಿ ಶೆಟ್ಟಿ, ಕಮ್ರಾನ್, ಶ್ರವಂತ್, ಅಬೂಬಕ್ಕರ್ ಹಮ್ದಾನ್ ಮತ್ತು ಬಿಲಾಲ್ ಇವರು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇವರು ಇಮ್ಮೋರ್ಟಲ್ ಮಾರ್ಷಲ್ ಆರ್ಟ್ಸ್ ಆಂಡ್ ಫಿಟ್‌ನೆಸ್ ಅಕಾಡೆಮಿಯ ಸಂಸ್ಥಾಪಕ ಹಾಗೂ ತರಬೇತುದಾರ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೋಹನ್ ಎಸ್. ಇವರ ಬಳಿ ತರಬೇತಿ ಪಡೆದಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article