ನವರಾತ್ರಿ ಪ್ರಯುಕ್ತ ವಿವಿಧ ಪಂದ್ಯಾಟ: ಮೂಡುಬಿದಿರೆಯ ‘ವಿಶ್ವ ತುಳುವೆರ್’ ಮಹಿಳಾ ಘಟಕಕ್ಕೆ ದ್ವಿತೀಯ ಸ್ಥಾನ
Tuesday, September 16, 2025
ಮೂಡುಬಿದಿರೆ: ಚೈತನ್ಯ ಫ್ರೆಂಡ್ಸ್ ಕಂಚರ್ಲಗುಡ್ಡೆ ಪಡು-ಮೂಡು ಕೊಣಾಜೆ ಇದರ ಆಶ್ರಯದಲ್ಲಿ ನವರಾತ್ರಿಯ ಪ್ರಯುಕ್ತ ಆಯೋಜಿಸಿದ್ದ ಪ್ರಥಮ ವರ್ಷದ ಮಹಿಳೆಯರ ವಿಭಾಗ ಹಾಗೂ ಪುರುಷರ ವಿಭಾಗದ ವಾಲಿಬಾಲ್, ಹಗ್ಗ ಜಗ್ಗಾಟ ಮತ್ತು ತ್ರೋ ಬಾಲ್ ಪಂದ್ಯಾಟದಲ್ಲಿ ಮಹಿಳೆಯರ ವಿಭಾಗದಲ್ಲಿ ಒಟ್ಟು 11 ತಂಡವು ಭಾಗವಹಿಸಿದು, ‘ವಿಶ್ವ ತುಳುವೆರ್’ ಮಹಿಳಾ ಘಟಕ ಮೂಡುಬಿದಿರೆ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
ಫಲಿತಾಂಶ:
ಪುರುಷರ ವಿಭಾಗದ ವಾಲಿಬಾಲ್‌ನಲ್ಲಿ ಗರೋಡಿ ಫ್ರೆಂಡ್ಸ್ (ಪ್ರಥಮ), ಮೂಡುಕೊಣಾಜೆಯ ಶ್ರೀ ವಿಠ್ಠಲ ಬಾಕ್ಯಾರು ಫ್ರೆಂಡ್ಸ್ ದರೆಗುಡ್ಡೆ (ದ್ವಿತೀಯ)
ಪುರುಷರ ಹಗ್ಗ ಜಗ್ಗಾಟದಲ್ಲಿ ‘ನಮ್ಮ ಜವನೆರ್’ ಹೌದಾಲ್ (ಪ್ರಥಮ), ಶಿವಾಜಿ ಫ್ರೆಂಡ್ಸ್ ಉಜಿರೆ (ದ್ವಿತೀಯ)
ಮಹಿಳೆಯರ ವಿಭಾಗದ ತ್ರೋಬಾಲ್‌ನಲ್ಲಿ ಚೈತನ್ಯ ಫ್ರೆಂಡ್ಸ್ ‘ಕೆಂಚರ್ಲ ಗುಡ್ಡೆ’ (ಪ್ರಥಮ), ‘ವಿಶ್ವ ತುಳುವೆರ್’ ಮಹಿಳಾ ಘಟಕ ಮೂಡುಬಿದಿರೆ (ದ್ವಿತೀಯ).
ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಬ್ರಹ್ಮಸ್ಥಾನ ಫ್ರೆಂಡ್ಸ್ (ಪ್ರಥಮ), ಮೂಡುಕೊಣಾಜೆ ಚೈತನ್ಯ ಫ್ರೆಂಡ್ಸ್ ‘ಕೆಂಚರ್ಲ ಗುಡ್ಡೆ’ (ದ್ವಿತೀಯ) ಬಹುಮಾನವನ್ನು ಪಡೆದುಕೊಂಡಿದೆ.
