ಸೆ.22 ರಿಂದ ಅ.1 ರವರೆಗೆ ಧರ್ಮಸ್ಥಳದಲ್ಲಿ ನವರಾತ್ರಿ ವೈಭವ
ಉಜಿರೆ: ನವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಸೆ.22 ರಿಂದ ಅ.1 ರ ವರೆಗೆ ವಿಶೇಷಪೂಜೆ ಹಾಗೂ ಪ್ರತಿದಿನ ಸಂಜೆ 6 ಗಂಟೆಯಿಂದ ಪ್ರವಚನ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸೆ.22 ರಂದು ಮಾಸ್ಟರ್ ಅಶ್ಮಿತ್ ಮಂಗಳೂರು (ಭಕ್ತಿಸಂಗೀತ), ಸೆ.23 ರಂದು ವಿದ್ಯಾ ಎಸ್. ರಾವ್ ಮತ್ತು ಬಳಗ ಉಡುಪಿ (ಶಾಸ್ತ್ರೀಯ ಸಂಗೀತ), ಸೆ.24 ರಂದು ಅನಘಾ ಅವಧೂತ್, ಬೆಳಗಾವಿ (ಸಿತಾರ್ ವಾದನ), ಸೆ.25 ರಂದು ಶ್ರೀವಿದ್ಯಾ, ಉಜಿರೆ (ಶಾಸ್ತ್ರೀಯ ಸಂಗೀತ), ಸೆ.26 ರಂದು ಸಿಂಚನಾ ಎಂ. ಗೌಡ ಮತ್ತು ಬಳಗ, ಪುತ್ತೂರು (ಭಕ್ತಿರಸಮಂಜರಿ), ಸೆ.27 ರಂದು ವಿದುಷಿ ಚಂದ್ರಿಕಾ ರಾಜಾರಾಮ್, ಬೆಂಗಳೂರು (ಶಾಸ್ತ್ರೀಯ ಸಂಗೀತ), ಸೆ.28 ರಂದು ವಿದುಷಿ ಅನುರಾಧ ಭಟ್, ಅಡ್ಕಸ್ಥಳ, ಕೇಪು, ವಿಟ್ಲ (ಶಾಸ್ತ್ರೀಯ ಸಂಗೀತ), ಸೆ.29 ರಂದು ಶ್ರೀಲಕ್ಷ್ಮೀ ಬೆಳ್ಮಣ್ಣು, ಬೆಂಗಳೂರು (ಶಾಸ್ತ್ರೀಯ ಸಂಗೀತ), ಸೆ.30 ರಂದು ನವ್ಯ ಎಂ.ಆರ್. ಮತ್ತು ಬಳಗ, ಪುತ್ತೂರು (ಸುಗಮ ಸಂಗೀತ), ಅ.1 ರಂದು ಆರಾಧ್ಯ ರಾವ್, ಬೆಂಗಳೂರು: ಭಕ್ತಿರಸಮಂಜರಿ (ಸಂಜೆ 6.30 ರಿಂದ 8.30 ರ ವರೆಗೆ), ಕ್ಷಿತಿ ರೈ, ಧರ್ಮಸ್ಥಳ: ಸುಗಮಸಂಗೀತ (ರಾತ್ರಿ ಗಂಟೆ 9 ರಿಂದ 11.30 ರ ವರೆಗೆ) ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.