26 ವರ್ಷಗಳ ಹಿಂದೆ ಕೋಮು ಗಲಭೆಯಲ್ಲಿ ಭಾಗಿಯಾದ ಆರೋಪಿಗಳ  ಸೆರೆ

26 ವರ್ಷಗಳ ಹಿಂದೆ ಕೋಮು ಗಲಭೆಯಲ್ಲಿ ಭಾಗಿಯಾದ ಆರೋಪಿಗಳ ಸೆರೆ


ಮಂಗಳೂರು: ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ 26 ವರರಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಲೀಲಾಧರ್ ಮತ್ತು ಚಂದ್ರಹಾಸ ಕೇಶವ ಶೆಟ್ಟಿ ಬಂಧಿತರು.

ತಲೆಮರೆಸಿಕೊಂಡಿದ್ದ ಆರೋಪಿ ಲೀಲಾಧರ್ ಎಂಬವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂದಸನ ವಿಧಿಸಿದೆ.
 ಇದೇ ಪ್ರರಕಣದಲ್ಲಿ ದುಬೈಗೆ ಪರಾರಿಯಾಗಿದ್ದ ಇನೋರ್ವ ಆರೋಪಿ ಚಂದ್ರಹಾಸ್ ಕೇಶವ ಶೆಟ್ಟಿ ರವರನ್ನು ಇತ್ತೀಚೆಗೆ  ಮುಂಬಯಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

1998 ರ ಡಿ.31 ರಂದು ಮುಲ್ಕಿ ಠಾಣಾ ಸರಹದ್ದಿನ ಹಳೆಯಂಗಡಿಯಲ್ಲಿ ನಡೆದ ಕೋಮು ಗಲಭೆ, ಬೆಂಕಿ ಹಚ್ಚಿ ನಡೆಸಿದ ಗಲಾಟೆ ಹಿನ್ನೆಲೆಯಲ್ಲಿ ಮುಲ್ಕಿ ಪೊಲೀಸ್ ಠಾಣೆ ಅ. ಕ್ರ.𝟬𝟲/𝟭𝟵𝟵𝟵 ಕಲಂ 143, 147, 148, 436, 427 r/w 149 IPC ಪ್ರಕರಣದಲ್ಲಿ, ಆರೋಪಿಗಳ ಪೈಕಿ ಆರೋಪಿ ಲೀಲಾಧರ್ ಮತ್ತು ಚಂದ್ರಹಾಸ್ ಕೇಶವ ಶೆಟ್ಟಿ ರವರು ಘಟನೆ ನಡೆದಾಗಿನಿಂದ ಪೊಲೀಸರಿಗೆ ಸಿಗದೇ ಪರಾರಿಯಾಗಿದ್ದರು. ಹಿಂದಿನ ತನಿಖಾಧಿಕಾರಿಗಳು ಇವರ ವಿರುದ್ದ ತಲೆಮರೆಸಿಕೊಂಡದ್ದ ಬಗ್ಗೆ ಉಲ್ಲೇಖಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article