ಆಳ್ವಾಸ್ ಫಿಸಿಯೋಥೆರಪಿ ಕಾಲೇಜಿನಲ್ಲಿ ವಿಶ್ವ ಫಿಸಿಯೋಥೆರಪಿ ದಿನಾಚರಣೆ

ಆಳ್ವಾಸ್ ಫಿಸಿಯೋಥೆರಪಿ ಕಾಲೇಜಿನಲ್ಲಿ ವಿಶ್ವ ಫಿಸಿಯೋಥೆರಪಿ ದಿನಾಚರಣೆ


ಮೂಡುಬಿದಿರೆ: ರೋಗಿಯೇ ವೈದ್ಯನ ವಿಸಿಟಿಂಗ್ ಕಾರ್ಡ್. ವೈದ್ಯನ ಯಶಸ್ಸಿನ ನಿಜವಾದ ಗುಟ್ಟು ಜನರ ತೃಪ್ತಿಯಲ್ಲಿದೆ ಎಂದು ಮಂಗಳೂರಿನ ಕ್ಷೇಮಾದ ಮೂಳೆ ಹಾಗೂ ಎಲುಬು ಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ವಿಕ್ರಮ್ ಶೆಟ್ಟಿ ನುಡಿದರು.

ಆಳ್ವಾಸ್ ಕಾಲೇಜ್ ಆಫ್ ಫಿಸಿಯೋಥೆರಪಿ ಮತ್ತು ರಿಸರ್ಚ್ ಸೆಂಟರ್ ‘ವಿಶ್ವ ಫಿಸಿಯೋಥೆರಪಿ ದಿನಾಚರಣೆಯ’ ಅಂಗವಾಗಿ ಆಯೋಜಿಸಿದ್ದ ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದು.


ಇಂದಿನ ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ, ಔಷಧಿ, ಸಾಧನಗಳು ಎಲ್ಲವೂ ಅಭಿವೃದ್ಧಿಯಾಗಿದ್ದರೂ, ರೋಗಿಯ ವಿಶ್ವಾಸವನ್ನು ಗಳಿಸುವುದು ವೈದ್ಯನ ವೈಯಕ್ತಿಕ ಸ್ಪರ್ಶದಿಂದಲೇ ಸಾಧ್ಯ. ತಾಳ್ಮೆ, ಸಹಾನುಭೂತಿ, ಸಮರ್ಪಣೆ ಇವು ವೈದ್ಯನ ಯಶಸ್ಸಿನ ಗುಟ್ಟು.  ತಂಡದಲ್ಲಿ ಕೆಲಸ ಮಾಡುವ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು. ತಂಡದ ಕಾರ್ಯದಿಂದ ವೈದ್ಯಕೀಯ ಸೇವೆಯಲ್ಲಿ ವೇಗ, ಗುಣಮಟ್ಟ ಮತ್ತು ಸಮರ್ಪಣೆ ಹೆಚ್ಚುತ್ತದೆ ಎಂದರು.  

ಉಪಪ್ರಾಂಶುಪಾಲ ಪ್ರೊ. ಹರಿಹರನ್ ಸುಧನ್ ರವಿಚಂದ್ರನ್ ಮಾತನಾಡಿ,  ಫಿಸಿಯೋಥೆರಪಿಸ್ಟ್ಗಳು ದಿನದ ನಿಗದಿತ ಸಮಯಕ್ಕೆ ಸೀಮಿತರಾಗದೆ, ರೋಗಿಯ ಅಗತ್ಯಕ್ಕೆ ತಕ್ಕಂತೆ ಸೇವೆ ನೀಡಲು ಸದಾ ಸಿದ್ಧರಿರಬೇಕು. ರೋಗಿಯ ಚೇತರಿಕೆ ತಮ್ಮ ವೈಯಕ್ತಿಕ ಅಗತ್ಯಕ್ಕಿಂತಲೂ ಪ್ರಮುಖವಾಗಿರಬೇಕು ಎಂದರು.  

ಈ ಸಂದರ್ಭದಲ್ಲಿ  ಕಾಲೇಜಿನ ವಾರ್ಷಿಕ ಸ್ಮರಣ ಸಂಚಿಕೆ ‘ಫಿಸಿಯೋ-ಇನ್ಸೆöÊಟ್’ ನ್ನು ಬಿಡುಗಡೆ ಮಾಡಲಾಯಿತು. ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ. ಕ್ಷಮಾ ಶೆಟ್ಟಿ ಇದ್ದರು.  ಡಾ. ಸೌಧ ಕಾರ್ಯಕ್ರಮವನ್ನು ನಿರೂಪಿಸಿ, ಡಾ. ಶುಭಲಕ್ಷ್ಮಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article