ಸೆ.29ರಿಂದ ಕೊಲ್ಯ ಶಾರದಾ ಮಹೋತ್ಸವ
ಮಂಗಳೂರು: ಶ್ರೀ ಶಾರದಾ ಸೇವಾ ಟ್ರಸ್ಟ್ ಕೊಲ್ಯ ಮತ್ತು ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕೊಲ್ಯ ಕೋಟೆಕಾರು ವತಿಯಿಂದ 44ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಸೆ. 29ರಿಂದ ಅ. 1ರ ವರೆಗೆ ನಡೆಯಲಿದೆ.
ಸೆ. 29ರಂದು ಬೆಳಗ್ಗೆ 9ಕ್ಕೆ ಸೋಮೇಶ್ವರ ಸೋಮನಾಥ ದೇವಸ್ಥಾನದ ಅರ್ಚಕ ಮಧ್ವೇಶ ಭಟ್ ಶಾರದಾ ವಿಗ್ರಹ ಪ್ರತಿಷ್ಠಾಪನೆ ನಡೆಸಲಿದ್ದಾರೆ. 11 ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಗಣೇಶ್ ಎಸ್. ರಾವ್ ಉದ್ಘಾಟಿಸಲಿದ್ದಾರೆ. ಲೇಡಿಹಿಲ್ ಎಸ್.ಎಲ್. ಶೇಟ್ ಡೈಮೆಂಡ್ ಹೌಸ್ ಮಾಲಕ ಎಂ. ರವೀಂದ್ರ ಶೇಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖಂಡರಾದ ಕೃಷ್ಣ ಶಿವಕೃಪಾ ಕುಂಜತ್ತೂರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಬೀರಿ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಗುತ್ತು ಕೋಟೆಕಾರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉದ್ಯಮಿಗಳಾದ ಸ್ವರ್ಣ ಸುಂದರ್, ಸೌಂದರ್ಯ ರಮೇಶ್, ಪ್ರವೀಣ್ ಸುವರ್ಣ ಬಗಂಬಿಲ, ಕಾವು ಪಂಚಲಿಂಗೇಶ್ವರ ದೇವಸ್ಥಾನ ಬಜಾಲ್ನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಚಂದ್ರ ಆಳ್ವ, ನಿವೃತ್ತ ಅಧ್ಯಾಪಕ ಕೆ.ಆರ್. ಚಂದ್ರ, ಬಿಜೆಪಿ ಮಹಿಳಾ ಮೋರ್ಚಾ ಮಂಗಳೂರು ಮಂಡಲದ ಅಧ್ಯಕ್ಷೆ ಮಾಧವಿ ಉಳ್ಳಾಲ್, ಕೋಟೆಕಾರ್ ಪಟ್ಟಣ ಪಂಚಾಯತಿನ ಕೌನ್ಸಿಲರ್ ರಾಘವ ಗಟ್ಟಿ ಭಾಗವಹಿಸಲಿದ್ದಾರೆ ಎಂದು ಕೊಲ್ಯ ಶ್ರೀ ಶಾರದಾ ಸೇವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಮಾರ್ ಕೆ.ಎಸ್. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ವಿಜೇತೆ ಸಿಂಧೂರ ರಾಜ, ಬಿಇ ಸಾಧಕಿ ಹಿಮಾಂಶು ಕೊಲ್ಯ, ಹಿರಿಯ ಸಾಧಕರಾದ ರಾಮಚಂದ್ರ ಕುಂಪಲ, ಪ್ರಕಾಶ್ ಎಚ್., ರಮೇಶ್ ಎ. ಕೊಟ್ಟಾರಿ ಚೆಂಬುಗುಡ್ಡೆ ಅವರನ್ನು ಸಮ್ಮಾನಿಸಲಾಗುವುದು. ರಾತ್ರಿ 7ರಿಂದ ನೃತ್ಯ ವೈಭವ ನಡೆಯಲಿದೆ. ಸೆ. 30ರಂದು ಬೆಳಗ್ಗೆ 11ಕ್ಕೆ ಏಕಾದಶಿ ಮಹಾತ್ಮೆ ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಳ್ಳಲಿದೆ. ಅ.1ರಂದು ಸಂಜೆ 5.30ಕ್ಕೆ ಶಾರದಾ ಮಾತೆಗೆ ಮಂಗಳ ಪೂಜೆ ಬಳಿಕ ವೈಭವದ ಶೋಭಾತಯಾತ್ರೆ ಹೊರಟು ಸೋಮೇಶ್ವರ ಕಡಲ ಕಿನಾರೆಯಲ್ಲಿ ಜಲಸ್ತಂಭನಗೊಳಿಸಲಾಗುವುದು ಎಂದರು.
ಶ್ರೀ ಶಾರದಾ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮೋಹನ್ ಶೆಟ್ಟಿ ಕುಂಪಲ, ಉಪಾಧ್ಯಕ್ಷ ಲಿಂಗಪ್ಪ ಪೂಜಾರಿ ಕೊಲ್ಯ, ಕೋಶಾಧಿಕಾರಿ ಉಮೇಶ್ ಕುಲಾಲ್, ಸಮಿತಿಯ ಅಧ್ಯಕ್ಷ ಗಣೇಶ್ ಕೊಲ್ಯ ಉಪಸ್ಥಿತರಿದ್ದರು.