ಕಣ್ಣುಗಳನ್ನು ಮರಣದ ನಂತರ ದಾನ ಮಾಡುವ ಮೂಲಕ ಇತರರಿಗೆ ಬೆಳಕಾಗಬೇಕು: ಡಾ. ಪ್ರೇಮ್ ಬಿ.

ಕಣ್ಣುಗಳನ್ನು ಮರಣದ ನಂತರ ದಾನ ಮಾಡುವ ಮೂಲಕ ಇತರರಿಗೆ ಬೆಳಕಾಗಬೇಕು: ಡಾ. ಪ್ರೇಮ್ ಬಿ.


ಮಂಗಳೂರು: ಮನುಷ್ಯನ ದೇಹದಲ್ಲಿ ಕಣ್ಣುಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ ಮನುಷ್ಯನ ಜೀವನದಲ್ಲಿ ಮೆದುಳಿನ ಬಳಿಕ ಕಣ್ಣುಗಳು ತುಂಬಾ ಸೂಕ್ಷ್ಮ ಅಂಗ. ಆ ಕಣ್ಣನ್ನು ಸುರಕ್ಷಿತವಾಗಿ ಸಂರಕ್ಷಿಸುವುದರೊಂದಿಗೆ ಮರಣದ ನಂತರ ಅದನ್ನು ದಾನ ಮಾಡಿ ಇತರರಿಗೆ ಬೆಳಕಾಗಬೇಕು ಎಂದು ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ಡಾ. ಪ್ರೇಮ್ ಬಿ. ಹೇಳಿದರು.

ಅವರು ಸೆ.11 ರಿಂದ 12 ರಂದು ನಗರದ ರಥಬೀದಿ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಯುವ ರೆಡ್ ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೇಂಜರ್ಸ್ ಘಟಕದ ಸಹಯೋಗದೊಂದಿಗೆ ‘ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ನಮಗೆ ಸಹಾಯ ಮಾಡಿದವರನ್ನು ನಾವು ಯಾವತ್ತೂ ನೆನಪಿಸಿಕೊಳ್ಳಬೇಕು. ಹಿಂದಿನ ಕಾಲಕ್ಕಿಂತ ಈಗಿನ ಪರಿಸ್ಥಿತಿ ಬದಲಾಗಿದೆ. ಸೂಕ್ತ ಸಮಯದಲ್ಲಿ ನೇತ್ರ ತಪಾಸಣೆ ಮಾಡಿಸುವುದರಿಂದ ಕಣ್ಣಿನ ರಕ್ಷಣೆ ಮಾಡಬಹುದು. ನಾವು ಕೆಲಸ ಮಾಡುವಾಗ ತುಂಬಾ ಗಮನ ಕೊಟ್ಟು ಕೆಲಸ ಮಾಡುತ್ತೇವೆ ಹಾಗಾಗಿ ಅದು ಕಣ್ಣಿನಲ್ಲಿರುವ ನೀರಿನ ಅಂಶ ಕಡಿಮೆಯಾಗಿಸುತ್ತದೆ. ಮೊಬೈಲನ್ನು ತುಂಬಾ ಸಮಯ ಬಳಸುವುದರಿಂದ ಕಣ್ಣಿಗೆ ತೊಂದರೆ ಉಂಟಾಗುತ್ತದೆ. ಆದುದರಿಂದ ತುಂಬಾ ಮಂದಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸತ್ತ ಮೇಲೆ ಮಣ್ಣು ಸೇರುವ ಕಣ್ಣು, ಇನ್ನೊಬ್ಬರ ಬಾಳನ್ನು ಬೆಳಗುವಂತಾಗಲಿ ಆದುದರಿಂದ ಪ್ರತಿಯೊಬ್ಬರೂ ಕಣ್ಣುದಾನ ಮಾಡಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಅವರು ನೇತ್ರದಾನದ ಮಹತ್ವವನ್ನು ಮತ್ತು ಸಂರಕ್ಷಣೆಯ ಬಗ್ಗೆ ಮಾತನಾಡಿದರು.

ಐಕ್ಯೂಎಸಿ ಸಂಯೋಜಕ ದೇವಿ ಪ್ರಸಾದ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ದುರ್ಗಪ್ಪ ಕಜೆಕರ, ರೋವರ್ ರೇಂಜರ್ಸ್ ಘಟಕದ ಸಂಯೋಜಕಿ ಡಾ. ಅಪರ್ಣ ಆಳ್ವ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಎಂ. ಹಾಗೂ ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಅಪರ್ಣ ಆಳ್ವ ಅವರು ತಮ್ಮ ಕಣ್ಣುಗಳನ್ನು ದಾನ ಮಾಡುವ ಸಂಕಲ್ಪ ಮಾಡಿದರು.

ವಿದ್ಯಾರ್ಥಿನಿ ಧನ್ಯ ಪ್ರಾರ್ಥನೆ ನೆರವೇರಿಸಿದರು. ರೆಡ್‌ಕ್ರಾಸ್ ಘಟಕದ ಸಂಯೋಜಕ ಡಾ. ಅಶೋಕ್ ಸಿ.ಕೆ. ಸ್ವಾಗತಿಸಿ, ಶೋಭಾವತಿ ವಂದಿಸಿದರು. ಐಕ್ಯೂಎಸಿ ಸಹ ಸಂಚಾಲಕಿ ಡಾ. ಜ್ಯೋತಿಪ್ರಿಯಾ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article