ವೆನ್ಲಾಕ್‌ನಲ್ಲಿ ಪ್ರಥಮ ಆಂಜಿಯೋಪ್ಲಾಸ್ಟಿ

ವೆನ್ಲಾಕ್‌ನಲ್ಲಿ ಪ್ರಥಮ ಆಂಜಿಯೋಪ್ಲಾಸ್ಟಿ


ಮಂಗಳೂರು: ಕೆಎಂಸಿ ಮತ್ತು ವೆನ್ಲಾಕ್ ಆಸ್ಪತ್ರೆಯ ಒಡಂಬಡಿಕೆಯಲ್ಲಿ ಇತ್ತೀಚೆಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಉದ್ಘಾಟನೆಗೊಂಡಿದ್ದ ಕ್ಯಾತ್‌ಲ್ಯಾಬ್‌ನಲ್ಲಿ ಸೋಮವಾರ ಪ್ರಥಮ ಬಾರಿಗೆ ಆಂಜಿಯೋಪ್ಲಾಸ್ಟಿ ಹಾಗೂ ಅಂಜಿಯೋಗ್ರಾಮ್ ಚಿಕಿತ್ಸೆ ಕೆಎಂಸಿಯ ಕಾರ್ಡಿಯಾಲಜಿಸ್ಟ್ ಡಾ .ನರಸಿಂಹ ಪೈ ನೇತೃತ್ವದಲ್ಲಿ ನಡೆಯಿತು. 

ಡಾ. ಶೋಧನ್ ಐತಾಳ್, ಡಾ.ವಿಜಯ್ ನಾಗಪ್ಪ , ಟೆಕ್ನಿಶಿಯನ್ಗಳಾದ ನಿಶಿತ್ ನಾಯಕ್, ರುಫ್ಸಾನ, ನರ್ಸಿಂಗ್ ಸ್ಟಾಫ್ ಮೇರಿ, ಪ್ರಿಯಾ ಕ್ರಾಸ್ತ, ಸೌಮ್ಯ, ಜನ್ಯಶ್ರೀ ವೈದ್ಯಕೀಯ ತಂಡದಲ್ಲಿದ್ದರು. ಮಾಹೆ ವತಿಯಿಂದ ಸುಮಾರು ೫ ಕೋಟಿ ರೂ. ವೆಚ್ಚ ಮಾಡಲಾಗಿದ್ದು , ಸ್ಟೆಂಟ್ ಹಾಗೂ ಇತರ ಔಷದ ಪರಿಕರಗಳನ್ನ ವೆನ್ಲಾಕ್ ಆಸ್ಪತ್ರೆಯಿಂದ ತರಿಸಲಾಗಿದೆ.

ಕಾತ್ಲ್ಯಾಬ್ ಸಂಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಬಿಪಿಎಲ್ ಕಾರ್ಡ್ ಇರುವವರಿಗೆ ಆಯುಷ್ಮಾನ್ ಅಡಿಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಡಾ.ಶರತ್ ಬಾಬು ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article